ADVERTISEMENT

ಅಭಿಮಾನಿಗಳ ಮನ ತಣಿಸಲು ಸಖತ್‌ ಹಾಟ್ ಚಿತ್ರಗಳ ಅಪ್‌ಲೋಡ್ ಮಾಡಿದ ಸನ್ನಿ ಲಿಯೋನ್

ಕೊರೊನಾ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಬೋರಾಗಿರುವ ಅಭಿಮಾನಿಗಳಿಗಾಗಿ ಟೂ ಪೀಸ್‌ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 4:57 IST
Last Updated 6 ಏಪ್ರಿಲ್ 2020, 4:57 IST
ಸನ್ನಿ ಲಿಯೋನ್‌
ಸನ್ನಿ ಲಿಯೋನ್‌   
""

ಕೊರೊನಾ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಬೋರಾಗಿರುವ ಅಭಿಮಾನಿಗಳ ಮನ ತಣಿಸಲು ಮಾದಕ ನಟಿ ಸನ್ನಿ ಲಿಯೋನ್‌ ಟೂ ಪೀಸ್‌ನಲ್ಲಿ (ಕನಿಷ್ಠ ಉಡುಗೆ) ತೆಗೆಸಿಕೊಂಡಿರುವ ಸರಣಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಏಪ್ರಿಲ್‌ 1ರಂದು ಅಭಿಮಾನಿಗಳನ್ನು ‘ಫೂಲ್‌’ ಮಾಡಲು ಹೋಗದೆ, ಕಿಸ್ಸಿಂಗ್‌ ವಿಡಿಯೊ ಹರಿಬಿಟ್ಟಿದ್ದರು. ಇದಾದ ಎರಡು ದಿನಗಳ ನಂತರ ಮತ್ತೆ ಅಭಿಮಾನಿಗಳ ಜತೆಗೆ ಲೈವ್‌ ಚಾಟ್‌ ನಡೆಸಿ, ತುಂಟ ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದರು.

ಪತಿ ಡೇನಿಯಲ್‌ ವೆಬರ್‌ ಮತ್ತು ಮಕ್ಕಳೊಂದಿಗೆ ಅವರು ಲಾಕ್‌ಡೌನ್‌ ಸಮಯವನ್ನು ಉಲ್ಲಾಸದಿಂದ ಕಳೆಯುತ್ತಿದ್ದಾರಂತೆ. ಮೂವರು ಮಕ್ಕಳನ್ನು ಪ್ರಾಮ್‌ನಲ್ಲಿ ಕೂರಿಸಿಕೊಂಡು, ದಂಪತಿ ಡಾನ್ಸ್‌ ಮಾಡುತ್ತಾ ಮಕ್ಕಳನ್ನು ಆಟ ಆಡಿಸುತ್ತಾ ಖುಷಿಪಡಿಸುತ್ತಿರುವ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

ADVERTISEMENT

ಕ್ವಾರಂಟೈನ್‌ಸಮಯವನ್ನು ಅಡುಗೆ ಮಾಡಲು, ತಮ್ಮ ಇಷ್ಟದ ಹವ್ಯಾಸವಾದ ಪೇಂಟಿಂಗ್‌ಗೆ ಬಳಸಿಕೊಳ್ಳುತ್ತಿದ್ದಾರೆ.ಮಕ್ಕಳ ಲಾಲನೆ– ಪಾಲನೆಗೆ ಕೆಲಸದವರನ್ನು ಅವಲಂಬಿಸದೆಪತಿ ಜತೆಗೆ ಅವರೇ ನಿಭಾಯಿಸುತ್ತಿದ್ದಾರಂತೆ.ಫಿಟ್ನೆಸ್‌ ಕಾಯ್ದುಕೊಳ್ಳಲು ಜೊತೆಗಾತಿ ಉಸ್ಮಾ ಅವರೊಂದಿಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿಯೇ ದಿನವೂ ಕಸರತ್ತು ಮಾಡುತ್ತಿದ್ದಾರೆ.

ಮಾದಕ ಸೌಂದರ್ಯದಿಂದಲೇ ಮೋಡಿ ಮಾಡಿರುವ ಈ ಚೆಲುವೆ ನೀಲಿಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಚಿತ್ರ ನಿರ್ಮಾಣ ಹಾಗೂ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮರಾಠಿ, ಬೆಂಗಾಲಿ ಚಿತ್ರಗಳಲ್ಲಿ ನಟಿಸಿರುವ ಅವರು ಈಗ ಮಾಲಿವುಡ್‌ಗೂ ಕಾಲಿಟ್ಟಿದ್ದಾರೆ.

ಸದ್ಯ ತಮಿಳಿನ ‘ವೀರಮದೇವಿ’, ಮಲಯಾಳದ ‘ರಂಗೀಲಾ’, ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಕೊಕೊಕೋಲಾ’ ಮತ್ತು ‘ಹೆಲೆನ್‌’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.