ADVERTISEMENT

ತಮನ್ನಾ ಮದ್ವೆ ಯಾವಾಗ?

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 14:05 IST
Last Updated 11 ಜೂನ್ 2019, 14:05 IST
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ   

‘ಮಿಲ್ಕ್ ಬ್ಯೂಟಿ’ ತಮನ್ನಾ ಭಾಟಿಯಾ ಮದುವೆ ಬಗ್ಗೆ ಅವಳ ಅಭಿಮಾನಿಗಳು ಪದೇಪದೇ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಆದರೆ, ಇದುವರೆಗೂ ಮದುವೆ ವಿಚಾರ ಸದ್ಯಕ್ಕಿಲ್ಲ ಅಂತ ಹೇಳುತ್ತಲೇ ಬಂದಿದ್ದಾರೆ. ಆದರೆ, ಈಚೆಗೆ ತಮ್ಮ ಮದುವೆ ವಿಚಾರ ಕುರಿತು ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

‘ನೋಡಿ ನಾನಿನ್ನೂ ವೃತ್ತಿಯಲ್ಲಿ ಇನ್ನೂ ಸಾಧನೆ ಮಾಡಬೇಕು. ಅಲ್ಲಿಯ ತನಕ ಮದುವೆಯ ಬಗ್ಗೆ ಯೋಚಿಸಲೂ ನನಗೆ ಪುರುಸೊತ್ತಿಲ್ಲ’ ಎಂದು ತಮನ್ನಾ ಕಡ್ಡಿಮುರಿದಂತೆ ಹೇಳಿದ್ದಾರೆ.

ಜೀವನದಲ್ಲಿ ನಾನು ಮಾಡಬೇಕಿರುವ ಕೆಲಸಗಳು ಇನ್ನೂ ಸಾಕಷ್ಟಿವೆ. ಮದುವೆಗೂ ಮುನ್ನ ಎಷ್ಟೊಂದು ಕೆಲಸಗಳನ್ನು ಮಾಡಬೇಕಿದೆ. ಈಜು ಕಲಿಯುವುದು, ವಾಹನ ಚಲಾಯಿಸುವುದು ಇವೆಲ್ಲವನ್ನೂ ಮದುವೆಗೂ ಮುನ್ನವೇ ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ. ತಮನ್ನಾ ಅಭಿನಯದ ‘ದೇವಿ 2’ ಸಿನಿಮಾ ಈಚೆಗಷ್ಟೇ ಬಿಡುಗಡೆಯಾಗಿದೆ. ಹಿಂದಿಯಲ್ಲಿ ‘ಖಾಮೋಷಿ’, ತೆಲುಗಿನಲ್ಲಿ ‘ಮಹಾಲಕ್ಷ್ಮೀ’ (ಕ್ವೀನ್ ರಿಮೇಕ್‌) ಹಾಗೂ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.