ADVERTISEMENT

‘ಅಭಿನೇತ್ರಿ 2’ರಲ್ಲಿ ಮತ್ತೇರಿಸುವ ತಮನ್ನಾ

Tamannaah bhatia

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:30 IST
Last Updated 22 ಮೇ 2019, 19:30 IST
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ   

ತಮಿಳಿನಲ್ಲಿ ಪ್ರಭುದೇವಗೆ ಜೋಡಿಯಾಗಿ ನಟಿಸಿದ್ದ ‘ದೇವಿ’ ಹಿಟ್ ಆದ ಬೆನ್ನಲ್ಲೇ ‘ದೇವಿ 2’ ಕೂಡಾ ತೆರೆ ಕಾಣಲು ಸಜ್ಜಾಗಿದೆ. ‘ದೇವಿ 2’ ರ ತೆಲುಗು ರಿಮೇಕ್ ಆಗಿರುವ ‘ಅಭಿನೇತ್ರಿ 2’ ಮೇ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಹಾಡೊಂದರಲ್ಲಿ ಕ‍ಪ್ಪು ಉಡುಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ತಮನ್ನಾ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ

ಐದು ವರ್ಷಗಳಲ್ಲಿ ನಾಲ್ಕು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಟಿ ತಮನ್ನಾ ಭಾಟಿಯಾ ‘ಅಭಿನೇತ್ರಿ 2’ ಸಿನಿಮಾದಲ್ಲಿ ಮತ್ತೊಮ್ಮೆ ಸಿನಿ ರಸಿಕರನ್ನು ರಂಜಿಸಲಿದ್ದಾರೆ.

‘ಬಾಹುಬಲಿ 2’ ಚಿತ್ರದ ಹಾಡೊಂದರಲ್ಲಿ ಮಾದಕವಾಗಿ ಕಾಣಿಸಿಕೊಂಡಿದ್ದ ತಮನ್ನಾ ನಂತರ ಕನ್ನಡದ ‘ಕೆಜಿಎಫ್’ ಸೇರಿದಂತೆ ಒಂದೆರಡುಸಿನಿಮಾಗಳ ಹಾಡುಗಳಲ್ಲಿ ಕಾಣಿಸಿ ಕೊಂಡರಾದರೂ ಅಭಿಮಾನಿಗಳ ಮನವನ್ನು ಅಷ್ಟಾಗಿ ಗೆದ್ದಿರಲಿಲ್ಲ.

ADVERTISEMENT

ತಮಿಳಿನಲ್ಲಿ ಪ್ರಭುದೇವಗೆ ಜೋಡಿಯಾಗಿ ನಟಿಸಿದ್ದ ‘ದೇವಿ’ ಹಿಟ್ಆದ ಬೆನ್ನಲ್ಲೇ ‘ದೇವಿ 2’ ಕೂಡಾ ತೆರೆ ಕಾಣಲು ಸಜ್ಜಾಗಿದೆ. ‘ದೇವಿ 2’ ರ ತೆಲುಗು ರಿಮೇಕ್ ಆಗಿರುವ ‘ಅಭಿನೇತ್ರಿ 2’ ಮೇ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಹಾಡೊಂದರಲ್ಲಿ ಕ‍ಪ್ಪು ಉಡುಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ತಮನ್ನಾ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ.

ಈ ಹಾಡು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಮನ್ನಾ ಅಭಿಮಾನಿಗಳು ಖುಷಿಯಾಗಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.