ADVERTISEMENT

ಮಾನಾಡು– ಲಿರಿಕಲ್‌ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 19:30 IST
Last Updated 24 ಜೂನ್ 2021, 19:30 IST
‘ಮಾನಾಡು’ ಹಾಡಿನ ದೃಶ್ಯದಲ್ಲಿ ಕಲ್ಯಾಣಿ ಪ್ರಿಯದರ್ಶಿನಿ– ಸಿಲಂಬರಸನ್‌
‘ಮಾನಾಡು’ ಹಾಡಿನ ದೃಶ್ಯದಲ್ಲಿ ಕಲ್ಯಾಣಿ ಪ್ರಿಯದರ್ಶಿನಿ– ಸಿಲಂಬರಸನ್‌   

ತಮಿಳು ನಟಸಿಲಂಬರಸನ್ ಟಿ.ಆರ್. ನಟನೆಯ ‘ಮಾನಾಡು’ ಚಿತ್ರದ ಲಿರಿಕಲ್‌ ಹಾಡಿನ ವಿಡಿಯೊಇತ್ತೀಚೆಗೆ ಬಿಡುಗಡೆಗೊಂಡಿದೆ. ಕನ್ನಡ, ತಮಿಳು ಸಹಿತ ಐದು ಭಾಷೆಗಳಲ್ಲಿ ಈ ಚಿತ್ರ ಸಿದ್ಧಗೊಳ್ಳುತ್ತಿದೆ.

ಮದುವೆ ಸಂಭ್ರಮದಲ್ಲಿ ನವ ಜೋಡಿಗಳ ಎದುರು ‘ಮಹರೆಜೈಲಾ ಅಲ್ಲಾ ಅಲ್ಲಾ ಎಲ್ಲಾ ಎಲ್ಲಾ’ ಎಂಬ ಹಾಡಿನಲ್ಲಿ ನಾಯಕ ಮತ್ತು ನಾಯಕಿ ಸಹನೃತ್ಯಗಾರರೊಂದಿಗೆಹೆಜ್ಜೆ ಹಾಕುವ ಗೀತೆಯ ವಿಡಿಯೊ ಇದಾಗಿದೆ. ಮದನ್‌ಕರ್ಕಿ ಸಾಹಿತ್ಯಕ್ಕೆ ಸಂಗೀತ ಸಂಯೋಜಕ ಯುವನ್‌ ಶಂಕರ್‌ರಾಜ ಹಾಡಿಗೆ ಧ್ವನಿಯಾಗಿದ್ದಾರೆ. ಸಹಗಾಯಕರಾಗಿ ರಿಜ್ವಾನ್, ರಾಜಭವತರಣಿ ಇದ್ದಾರೆ.

ರಾಜಕೀಯ ಕಥಾ ವಸ್ತು ಹೊಂದಿರುವ ಈ ಚಿತ್ರದ ಕಥೆ ರಚನೆ-ನಿರ್ದೇಶನ ವೆಂಕಟ್‌ಪ್ರಭು, ಛಾಯಾಗ್ರಹಣ ರಿಚರ್ಡ್ ಎಂ. ನಾಥನ್, ಸಂಕಲನ ಪ್ರವೀಣ್ ಕೆ.ಎಲ್., ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ. ಸುರೇಶ್‌ಕಮತ್‌ಚಿ ಅವರು ‘ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ADVERTISEMENT

ಚಿತ್ರಕ್ಕೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್.ಜೆ.ಸೂರ್ಯ ಉಳಿದಂತೆ ವೈ.ಜಿ.ಮಹೇಂದ್ರನ್, ವಾಗಿ ಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ.ಭಾರತಿ, ಪ್ರೇಮ್‌ಜಿ ಅಮರೆನ್, ಡ್ಯಾನಿಯೆಲ್, ಕರುಣಾಕರನ್ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.