ADVERTISEMENT

ನಿರ್ಮಾಪಕಿ, ಖ್ಯಾತ ಕಾಸ್ಟಿಂಗ್ ಡೈರೆಕ್ಟರ್ ಸೆಹರ್ ಅಲಿ ಲತೀಫ್ ನಿಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 5:36 IST
Last Updated 8 ಜೂನ್ 2021, 5:36 IST
ಸೆಹರ್ ಅಲಿ ಲತೀಫ್ (ಟ್ವಿಟರ್‌ ಚಿತ್ರ)
ಸೆಹರ್ ಅಲಿ ಲತೀಫ್ (ಟ್ವಿಟರ್‌ ಚಿತ್ರ)   

ಮುಂಬೈ: ಬಾಲಿವುಡ್‌ನ ನಿರ್ಮಾಪಕಿ ಹಾಗೂ ಕಾಸ್ಟಿಂಗ್‌ ನಿರ್ದೇಶಕಿ ಸೆಹರ್ ಅಲಿ ಲತೀಫ್ಸೋಮವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಳ್ಳುತ್ತಿದ್ದರು. ಕಳೆದೊಂದು ವಾರದಿಂದ ಚೇತರಿಸಿಕೊಳ್ಳುತ್ತಿದ್ದ ಸೆಹರ್ ನಿಧನ ಹೊಂದಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ದಿವಂಗತ ನಟ ಇರ್ಫಾನ್ ಖಾನ್ ನಟನೆಯ ‘ದಿ ಲಂಚ್ ಬಾಕ್ಸ್‘ ಸಿನಿಮಾ ನಿರ್ಮಾಣ ಮಾಡಿದ್ದರು. ಈಚಿತ್ರದಲ್ಲಿ ಕಾಸ್ಟಿಂಗ್‌ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಸೆಹರ್‌ಗೆ ಈ ಚಿತ್ರ ದೊಡ್ಡ ಮಟ್ಟದಖ್ಯಾತಿ ತಂದುಕೊಟ್ಟಿತ್ತು.

ADVERTISEMENT

ಸ್ವರಾ ಭಾಸ್ಕರ್ ಅಭಿನಯದ ಭಾಗ್ ಬೀನಿ ಭಾಗ್ ಹಾಗೂ ಮಸ್ಕಾ ಸಿನಿಮಾ ನಿರ್ಮಿಸುವ ಮೂಲಕಸೆಹರ್‌ ಖ್ಯಾತಿಗಳಿಸಿದ್ದರು.

ಸೆಹರ್ ನಿಧನಕ್ಕೆ ನಟಿ ನಿಮ್ರತ್ ಕೌರ್,ಸ್ವರಾ ಭಾಸ್ಕರ್, ನಟ ರಾಜ್ ಕುಮಾರ್ ರಾವ್, ಹುಮಾ ಖುರೇಷಿ, ಅನುರಾಗ್ಕಶ್ಯಪ್ ಸೇರಿದಂತೆ ಬಾಲಿವುಡ್‌ನ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.