ADVERTISEMENT

ರಗಡ್ ಲುಕ್‍ನಲ್ಲಿ ದರ್ಶನ್: 'ರಾಬರ್ಟ್‌' ಪೋಸ್ಟರ್‌ಗೆ 'D BOSS' ಅಭಿಮಾನಿಗಳು ಫಿದಾ

​ಪ್ರಜಾವಾಣಿ ವಾರ್ತೆ
Published 25 ಮೇ 2020, 13:00 IST
Last Updated 25 ಮೇ 2020, 13:00 IST
ಫೋಸ್ಟರ್‌
ಫೋಸ್ಟರ್‌   

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರ ತಂಡ ರಂಜಾನ್ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.

ರಾಬರ್ಟ್ ಚಿತ್ರ ತಂಡ ಹೊಸ ಫೋಸ್ಟರ್‌ಬಿಡುಗಡೆ ಮಾಡುವ ಮೂಲಕಮುಸ್ಲಿಂ ಭಾಂದವರಿಗೆ ಈದ್ ಮುಬಾರಕ್ ತಿಳಿಸಿದೆ.

ಬಿಡುಗಡೆಯಾಗಿರುವ ಹೊಸ ಫೋಸ್ಟರ್‌ನಲ್ಲಿ ದರ್ಶನ್ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ದಚ್ಚು ಅಭಿಮಾನಿಗಳು ‌ಈಫೋಸ್ಟರ್‌ಗೆ ಫಿದಾಆಗಿದ್ದಾರೆ. ಈಗಾಗಲೇ ಫೋಸ್ಟರ್‌ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ADVERTISEMENT

‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಬರ್ಟ್‌ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂಬ ಸುಳಿವನ್ನುಚಿತ್ರತಂಡ ನೀಡಿದೆ.

‘ರಾಬರ್ಟ್’ ಸಿನಿಮಾದ ಪೋಸ್ಟರ್‌ಗಳು, ಟೀಸರ್‌ಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿವೆ.
ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಾಯಕಿಯಾಗಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ವಿನೋದ್‌ ಪ್ರಭಾಕರ್‌ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.