ADVERTISEMENT

‘ವಕೀಲ್‌ ಸಾಬ್‌’ ಟೀಸರ್‌: ಪವನ್‌ ಕಲ್ಯಾಣ್ ಅಬ್ಬರಕ್ಕೆ ಅಭಿಮಾನಿಗಳು ಫಿದಾ..!

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 15:05 IST
Last Updated 14 ಜನವರಿ 2021, 15:05 IST
 ಪವನ್‌ ಕಲ್ಯಾಣ್
ಪವನ್‌ ಕಲ್ಯಾಣ್   

ತೆಲುಗು ಪವರ್‌ಸ್ಟಾರ್‌ ಪವನ್‌ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

3 ವರ್ಷಗಳ ನಂತರ ‘ವಕೀಲ್ ಸಾಬ್’ಚಿತ್ರದ ಮೂಲಕ ಪವನ್‌ ಕಲ್ಯಾಣ್‌ ತೆರೆ ಮೇಲೆ ಬರುತ್ತಿರುವುದಕ್ಕೆ ಅಭಿಮಾನಿಗಳಿಗೆ ಮಸ್ತ್‌ ಖುಷಿಯಾಗಿದೆ. ಪವನ್‌ ಅವರನ್ನು ತೆರೆಯ ಮೇಲೆ ಕಾಣಲುಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

ಈ ಚಿತ್ರವು ಹಿಂದಿಯ ‘ಪಿಂಕ್‌‌’ನ ರಿಮೇಕ್ ಆಗಿದೆ. ಇದರಲ್ಲಿ ಪವನ್ ವಕೀಲನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನ್ಯಾಯದೇವತೆಯ ರಕ್ಷಕನಾಗಿ ಪವನ್‌ ಮಿಂಚಿದ್ದಾರೆ. ಕೋಪ, ತಾಪ, ಉದ್ವೇಗಗಳ ಮೂಲಕ ಪವನ್‌ ಟೀಸರ್‌ನಲ್ಲಿ ಗಮನ ಸೆಳೆಯುತ್ತಾರೆ.

ADVERTISEMENT

ಕೋರ್ಟಿನಲ್ಲಿ ವಾದ ಮಾಡುವುದು ಗೊತ್ತು, ಕೋಟ್‌ ತೆಗೆದು ನಾಲ್ಕು ಬಾರಿಸುವುದು ಗೊತ್ತು ಎಂಬ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್‌ ಬಿಡುಗಡೆಯಾಗಿ ಗಂಟೆಯಲ್ಲೇ 5 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.

ಈ ಸಿನಿಮಾವೂ ಕಳೆದ ಬೇಸಿಗೆಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು. ಸಂಕ್ರಾಂತಿಗೆ ಟೀಸರ್‌ ಬಿಡುಗಡೆಯಾಗಿದ್ದು ಯುಗಾದಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.

ಈ ಸಿನಿಮಾವನ್ನು ವೇಣು ಶ್ರೀರಾಮ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತಮನ್ ಸಂಗೀತ ನಿರ್ದೇಶನವಿದೆ. ದಿಲ್‌ರಾಜು ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.