ಚಿತ್ರಮಂದಿರಗಳಲ್ಲಿ ಯಾವ ಭಾಷೆಯ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಇಲ್ಲ. ಹೀಗಾಗಿ ಈ ವಾರ ಎರಡು ಸಿನಿಮಾಗಳು ಮಾತ್ರ ತೆರೆ ಕಾಣುತ್ತಿವೆ.
ಯುವ ರಾಜ್‌ಕುಮಾರ್, ಸಂಜನಾ ಆನಂದ್ ಜೋಡಿಯಾಗಿ ನಟಿಸಿರುವ ಸಿನಿಮಾ ಹಲವು ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ‘ಬ್ಯಾಂಗಲ್ ಬಂಗಾರಿ’ ಹಾಡು ಟ್ರೆಂಡ್ ಆಗಿದೆ.
ರೋಹಿತ್ ಪದಕಿ ನಿರ್ದೇಶನದ ಚಿತ್ರವಿದು. ‘ಡೆಡ್ಲಿ ಸೋಮ’ ಖ್ಯಾತಿಯ ನಟ ಆದಿತ್ಯ, ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡ ಅಭಿನಯಿಸಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹಾಗೂ ಶ್ರೀಲೀಲಾ ನಟನೆಯ ಸಿನಿಮಾವಿದು. ರಾಧಾಕೃಷ್ಣ ರೆಡ್ಡಿ ನಿರ್ದೇಶನವಿದೆ.
‘ಜೋಗಿ’ ಸಿನಿಮಾದ ‘ಹೊಡಿ ಮಗ’ ನಾನು ಮೊದಲು ಡಾನ್ಸ್ ಮಾಡಿದ ಹಾಡು. ನನಗೆ ಅಪ್ಪು ಅವರ ‘ಜಾಕಿ’ ಸಿನಿಮಾ ನಟನಾಗಲು ಸ್ಫೂರ್ತಿ ಕೊಟ್ಟಿತು. 13 ವರ್ಷದ ಬಳಿಕ ಕನ್ನಡಕ್ಕೆ ಜೆನಿಲಿಯಾ ಮರಳಿದ್ದಾರೆ. ರವಿಚಂದ್ರನ್, ಗಿರಿಜಾ ಲೋಕೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ’ ಎಂದಿದ್ದಾರೆ ಕಿರೀಟಿ.
‘ಈ ಸಿನಿಮಾ ಅಪ್ಪನ ಕನಸು. ಮೂರು ವರ್ಷದ ಜರ್ನಿ. ಅಷ್ಟು ಸಿಂಪಲ್ ಆಗಿ ನಿರ್ಮಾಣಗೊಂಡ ಸಿನಿಮಾವಲ್ಲ. ಪ್ರತಿ ಕುಟುಂಬದ ಎಮೋಷನ್, ನೋವು ಇದರಲ್ಲಿದೆ. ಈ ಚಿತ್ರ ನೋಡಿದಾಗ ‘ಮಾಣಿಕ್ಯ’ ನೆನಪಾಯ್ತು. ನಾನು ಈ ಚಿತ್ರದಲ್ಲಿ ತಂದೆ ಪಾತ್ರ ಮಾಡಿದ್ದೇನೆ. ತಂದೆ–ಮಗನ ಎಮೋಷನ್ ಈ ಚಿತ್ರದ ಮೂಲಕ ಜನರಿಗೆ ತಲುಪುತ್ತದೆ’ ಎಂದು ರವಿಚಂದ್ರನ್ ಹೇಳಿದ್ದಾರೆ.
ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ‘ಬಾಹುಬಲಿ’, ‘ಆರ್‌ಆರ್‌ಆರ್’ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ಛಾಯಾಚಿತ್ರಗ್ರಹಣವಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.