ADVERTISEMENT

ಇದು ‘ಒಜಿಎಫ್‌’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:30 IST
Last Updated 1 ಏಪ್ರಿಲ್ 2019, 19:30 IST
ಸಾಶಾ ಚೆಟ್ರಿ
ಸಾಶಾ ಚೆಟ್ರಿ   

ಒಜಿಎಫ್‌... ಇದು ತಮಿಳು ಸಿನಿಮಾ ಶೀರ್ಷಿಕೆಯೊಂದರ ಹ್ರಸ್ವರೂಪ. ‘ಆಪರೇಷನ್‌ ಗೋಲ್ಡ್‌ ಫಿಶ್‌’ ಎಂಬುದು ಸಿನಿಮಾದ ಪೂರ್ತಿಹೆಸರು. ಸಾಯಿಕಿರಣ್‌ ಅಡಿವಿ ನಿರ್ದೇಶನದ ಒಜಿಎಫ್‌ನ ಫಸ್ಟ್‌ ಲುಕ್‌ ಮೊನ್ನೆ ತಾನೇ ಬಿಡುಗಡೆಯಾಗಿದೆ. ನಾಯಕನಟ ಮತ್ತು ಪೋಷಕ ನಟನಾಗಿ ಮಿಂಚಿದ ಮನೋಜ್‌ ನಂದಮ್‌ ಮೊದಲ ಬಾರಿಗೆ ಖಳಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಈ ಚಿತ್ರದ ಹೈಲೈಟ್‌ಗಳಲ್ಲೊಂದು.

ಈ ಹಿಂದೆ ಮಹೇಶ್‌ಬಾಬು ಮತ್ತು ಪ್ರಭಾಸ್‌ ಅವರ ಕಿರಿವಯಸ್ಸಿನ ಪಾತ್ರಗಳಿಗೆ ಜೀವ ತುಂಬಿ ಕಾಲಿವುಡ್‌ನ ಗಮನ ಸೆಳೆದವರು ಮನೋಜ್‌. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದಾಗಲೇ ನಟನಾ ಕೌಶಲವನ್ನು ಸಾಬೀತು‍ಪಡಿಸಿದವರು. ನಾಯಕನಟನಾಗಿ ಅಭಿನಯಿಸಿದ್ದ ‘ಒಕ ರೊಮ್ಯಾಂಟಿಕ್‌ ಕ್ರೈಮ್‌ ಕಥಾ’ ಬಳಿಕ ಮನೋಜ್‌ಗೆ ಹೊಸ ಅವಕಾಶಗಳು ಹುಡುಕಿಬಂದಿದ್ದವು. ಅಂತಹವುಗಳಲ್ಲಿ ‘ಒಜಿಎಫ್’ ಒಂದು.

ಏರ್‌ಟೆಲ್‌ ಜಾಹೀರಾತಿನ ಮೂಲಕ ಮನೆಮಾತಾಗಿರುವ ಸಾಶಾ ‘ಒಜಿಎಫ್‌’ ನಾಯಕನಟಿ. ಕಟ್ಟಾ ಆಶಿಶ್‌ ರೆಡ್ಡಿ, ಕೇಶವ ಉಮಾ ಸ್ವರೂಪ್‌, ಪದ್ಮನಾಭ ರೆಡ್ಡಿ, ಗ್ಯಾರಿ, ಸತೀಶ್ ಡೇಗಲ ಇತರ ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ. ದಾಮೋದರ್‌ ಯಾದವ್‌ ಮತ್ತು ಕಿರಣ್್ರೆಡ್ಡು ತುಮ್ಮಾ ‘ಒಜಿಎಫ್‌’ಗೆ ಬಂಡವಾಳ ಹೂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.