ಬೆಂಗಳೂರು: ಹಾಲಿವುಡ್ ನಟ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಭಾರತದಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇದರ ಬೆನ್ನಲೇ ಕ್ರೂಸ್ ಬಾಲಿವುಡ್ ಶೈಲಿಯ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 'ಬೇರೆ ಬೇರೆ ಸಂಸ್ಕೃತಿ ನನಗೆ ಇಷ್ಟ. ಡ್ರಾಮಾ, ಕಾಮಿಡಿ, ಹಾಡುಗಳನ್ನು ಹೊಂದಿರುವ ಭಾರತೀಯ ಶೈಲಿಯ ಸಿನಿಮಾ ಮಾಡುವ ಆಸೆಯಿದೆ' ಎಂದಿದ್ದಾರೆ.
‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಇದೇ ಮೇ 17 ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಮಿಷನ್ ಇಂಪಾಸಿಬಲ್ ಅಮೆರಿಕದ ಲೇಖಕ ಬ್ರೂಸ್ ಸೆಲ್ಲರ್ ಅವರ ಕಾಲ್ಪನಿಕ ಕಥೆ ಆಧಾರಿತ ಸರಣಿ ಚಿತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.