ADVERTISEMENT

ಜನಸಂದಣಿಯಲ್ಲಿ ಇಬ್ಬರು ಮಲಯಾಳಿ ಯುವ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಯತ್ನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2022, 9:25 IST
Last Updated 28 ಸೆಪ್ಟೆಂಬರ್ 2022, 9:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದಲ್ಲಿಚಿತ್ರವೊಂದರ ಪ್ರಚಾರಕ್ಕೆ ಮಾಲ್‌ಗೆ ತೆರಳಿದ್ದ ವೇಳೆ ಅಲ್ಲಿ ನೆರೆದಿದ್ದ ಜನಸಂದಣಿಯಲ್ಲೇ ಇಬ್ಬರು ಮಲಯಾಳಿ ಯುವ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಾಗಿದೆ.

ಗ್ರೇಸ್ ಅಂಟೋನಿ ಹಾಗೂ ಸಾನ್ಯಾ ಇಯ್ಯಪ್ಪನ್ ಎಂಬ ಇಬ್ಬರು ನಟಿಯರು ಈ ಆರೋಪ ಮಾಡಿದ್ದಾರೆ. ಕೋಯಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಸಾಟರ್‌ಡೇ ನೈಟ್ಸಿನಿಮಾ ಪ್ರಚಾರ ವೇಳೆಈ ಘಟನೆ ಇತ್ತೀಚೆಗೆ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ವ್ಯಕ್ತಿಗಳು ನಟಿಯ ಕೈಹಿಡಿದು ಅಸಭ್ಯವಾಗಿ ವರ್ತಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ.

ADVERTISEMENT

ಆ ಸಂದರ್ಭದಲ್ಲಿ ತಮಗೆ ಆದ ಅನುಭವವನ್ನು ನಟಿಯರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಘಟನೆಯನ್ನು ಖಂಡಿಸಿದ್ದಾರೆ. ಕೆಲ ಅಸಹ್ಯಕರ ವ್ಯಕ್ತಿಗಳು ಜನಸಂದಣಿಯಲ್ಲಿ ತಮ್ಮ ಕೈಯನ್ನು ಹಿಡಿದು ಎಳೆದರು, ಮೈಯನ್ನು ಸವರಲು ನೋಡಿದರು. ಇಂಥವರ ಮೇಲೆ ಸೂಕ್ತ ಕ್ರಮಗಳು ಆಗಬೇಕು ಎಂದು ಆಗ್ರಹಿಸಿದ್ದಾರೆ.

ವ್ಯಕ್ತಿಗಳು ನಮ್ಮನ್ನು ಮುಟ್ಟಿದ್ದು ಸೌಮ್ಯವಾಗಿರಲಿಲ್ಲ. ನಮಗೆ ಲೈಂಗಿಕ ದೌರ್ಜ್ಯನ್ಯವಾಗಿದೆ ಎಂದು ನಟಿಯರು ನೋವು ತೋಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೂರು ದಾಖಲಾಗಿಲ್ಲ.ಸಾಟರ್‌ಡೇ ನೈಟ್ಸಿನಿಮಾ ಅಕ್ಟೋಬರ್ 5 ಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.