ADVERTISEMENT

ಉಪೇಂದ್ರ ಜನ್ಮದಿನಕ್ಕೆ ‘UI’ ಟೀಸರ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಉಪೇಂದ್ರ 
ಉಪೇಂದ್ರ    

ಚಂದನವನದ ‘ರಿಯಲ್‌ ಸ್ಟಾರ್‌’ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಚಿತ್ರ ‘UI’ಯ ಟೀಸರ್‌ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡಿದ್ದಾರೆ. ಉಪೇಂದ್ರ ಜನ್ಮದಿನದಂದೇ(ಸೆ.18) ಮಧ್ಯಾಹ್ನ 3 ಗಂಟೆಗೆ ‘UI’ ಟೀಸರ್‌ ರಿಲೀಸ್‌ ಆಗಲಿದೆ. 

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್‌ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಭಿಮಾನಿಗಳ ಸಮ್ಮುಖದಲ್ಲಿ ಉಪೇಂದ್ರ ಅವರು ಜನ್ಮದಿನಾಚರಣೆ ಹಾಗೂ ಟೀಸರ್‌ ಸಂಭ್ರಮವನ್ನು ಆಚರಿಸಲಿದ್ದಾರೆ. ಟೀಸರ್‌ ಬಿಡುಗಡೆ ಘೋಷಣೆಯನ್ನು ವಿಭಿನ್ನವಾದ ಪ್ರಚಾರದ ಮೂಲಕ ಚಿತ್ರತಂಡ ಮಾಡಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತಂಡ ತೊಡಗಿಸಿಕೊಂಡಿದೆ. ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಹೆಚ್ಚಿನ ಗ್ರಾಫಿಕ್ಸ್‌ ಬಳಕೆ ಮಾಡಲಾಗಿದ್ದು, ಮತ್ತೊಮ್ಮೆ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮ ಕೈಚಳಕ ತೋರಿಸಲು ರಿಯಲ್‌ ಸ್ಟಾರ್‌ ಸಜ್ಜಾಗಿದ್ದಾರೆ. 

ಲಹರಿ ಫಿಲಂಸ್ ಹಾಗೂ ವೀನಸ್‌ ಎಂಟರ್‌ಟೈನರ್ಸ್‌ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ತರ್ಲೆನನ್ಮಗ’ನಿಂದ ಹಿಡಿದು ‘ಶ್‌’, ‘ಓಂ’, ‘ಆಪರೇಷನ್‌ ಅಂತ’, ‘ಎ’, ‘ಸ್ವಸ್ತಿಕ್‌’, ‘ಉಪೇಂದ್ರ’, ‘ಸೂಪರ್‌’, ‘ಉಪ್ಪಿ–2’ ಹೀಗೆ ಸಾಲು ಸಾಲು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಕನಾಗಿ ತೆರೆ ಮೇಲೆ ಬರಲಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.