ADVERTISEMENT

ಬರಲಿದೆ ‘90 ಹೊಡಿ ಮನೀಗ್ ನಡಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 10:45 IST
Last Updated 2 ಏಪ್ರಿಲ್ 2021, 10:45 IST
‘90 ಹೊಡಿ ಮನೀಗ್ ನಡಿ’ ಚಿತ್ರದಲ್ಲಿ ವೈಜನಾಥ್‌ ಬಿರಾದಾರ್‌
‘90 ಹೊಡಿ ಮನೀಗ್ ನಡಿ’ ಚಿತ್ರದಲ್ಲಿ ವೈಜನಾಥ್‌ ಬಿರಾದಾರ್‌   

ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಹಾಸ್ಯ ಪ್ರಧಾನ ‘90 ಹೊಡಿ ಮನೀಗ್ ನಡಿ’ ಚಿತ್ರ ಇತ್ತೀಚೆಗೆ ಚಿತ್ರೀಕರಣಕ್ಕೆ ಕುಂಬಳಕಾಯಿ ಶಾಸ್ತ್ರ ಮುಗಿಸಿಕೊಂಡಿದೆ. ‘ಅಮ್ಮ ಟಾಕೀಸ್ ಬಾಗಲಕೋಟೆ’ ಬ್ಯಾನರಿನಡಿ ತಯಾರಾಗುತ್ತಿರುವ ಈ ಸಿನಿಮಾಗೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿ ನಿರ್ದೇಶನ ಮಾಡಿದ್ದಾರೆ. ರತ್ನಮಾಲಾ ಬಾದರದಿನ್ನಿ ನಿರ್ಮಿಸಿದ್ದಾರೆ. ಟಾಕಿ, ಸಾಂಗ್, ಫೈಟ್ ಸೇರಿದಂತೆ ಈ ಹಿಂದೆ ಬೆಂಗಳೂರು, ಬಾಗಲಕೋಟೆ, ಬಿಡದಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಬೆಂಗಳೂರಿನ ಮಾಗಡಿ ರಸ್ತೆಯ ಸುತ್ತಮುತ್ತ ಹಾಸ್ಯ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.

ಬಿರಾದಾರ್‌ ಅವರ ವೃತ್ತಿ ಜೀವನದ 500ನೇ ಚಿತ್ರ ಇದು. ಈ ಚಿತ್ರದಲ್ಲಿ ಬಿರಾದಾರ್‌ ನಾಯಕ. ಜತೆಗೆ ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್.ಡಿ ಬಾಬು, ವಿವೇಕ್ ಜಂಬಗಿ, ನೀತಾ, ಪ್ರೀತು ಪೂಜಾ, ರುದ್ರಗೌಡ ಬಾದರದಿನ್ನಿ, ಹೊಸ್ಕೋಟೆ ಮುರುಳಿ, ಎಲ್ಐಸಿ ಲೋಕೇಶ್ ತೆರೆ ಹಂಚಿಕೊಂಡಿದ್ದಾರೆ. ಇನ್ನು ಕವಿರತ್ನ ಡಾ‌.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಕಿರಣ್ ಶಂಕರ್ ಮತ್ತುಶಿವು ಭೇರಗಿ ಸಂಗೀತ, ರಾಕಿರಮೇಶ್ ಸಾಹಸ, ಯುಡಿವಿ ವೆಂಕಿ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT