ADVERTISEMENT

ಪ್ರೇಮಿಗಳ ದಿನ ಚಂದನವನದಲ್ಲಿ 'ಮುತ್ತಿನ ಮಳೆ'...

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 11:10 IST
Last Updated 15 ಫೆಬ್ರುವರಿ 2020, 11:10 IST
ಏಕ್ ಲವ್ ಯಾ ಚಿತ್ರದ ದೃಶ್ಯ
ಏಕ್ ಲವ್ ಯಾ ಚಿತ್ರದ ದೃಶ್ಯ   

ಬೆಂಗಳೂರು: ಚಂದನವನದಲ್ಲಿ ಪ್ರೇಮಿಗಳ ದಿನದ(ಫೆಬ್ರುವರಿ 14) ಅಂಗವಾಗಿ ವಿವಿಧ ಚಿತ್ರತಂಡಗಳು ‘ಮುತ್ತನ್ನೇ‘ ಮುಖ್ಯವಾಗಿರಿಸಿಕೊಂಡು ಪೋಸ್ಟರ್‌ ಮತ್ತು ಟೀಸರ್‌ಗಳನ್ನು ಬಿಡುಗಡೆ ಮಾಡಿವೆ.

ಸಿನಿಮಾ ಅಭಿಮಾನಿಗಳನ್ನು ಸೆಳೆಯಲು ಚಿತ್ರತಂಡಗಳು ಆಕರ್ಷಕವಾಗಿ ಮುತ್ತಿನ ಕಸರತ್ತು ಮಾಡಿವೆ.ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಮುತ್ತಿನ‘ ಟೀಸರ್‌ ಮತ್ತು ಪೋಸ್ಟರ್‌ಗಳು ಅಬಿಮಾನಿಗಳ ಮತ್ತೇರಿಸಿರುವುದು ಸುಳ್ಳಲ್ಲ! ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಮತ್ತು ಟೀಸರ್‌ಗಳು ವೈರಲ್‌ ಆಗಿವೆ.

ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದಲ್ಲಿ ರಚಿತಾ ರಾಮ್‌ ಮತ್ತು ನಾಯಕ ರಾಣಾ ಅವರ ಲಿಪ್‌ಲಾಕ್‌ ದೃಶ್ಯ ವೈರಲ್‌ ಆಗಿದೆ. ಈ ಚಿತ್ರದ ಟೀಸರ್‌ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ನಟ ಸಂಚಾರಿ ವಿಜಯ್ ಹಾಗೂ ಅನನ್ಯ ಶೆಟ್ಟಿ ಅಭಿನಯದ'ಮೇಲೊಬ್ಬ ಮಾಯಾವಿ' ಸಿನಿಮಾದ ಪೋಸ್ಟರ್ ಕೊಡ ನಿನ್ನೆ ಬಿಡುಗಡೆಯಾಗಿದೆ. ಈ ಪೋಸ್ಟರ್‌ ಕೂಡ ಮುತ್ತಿನ ದೃಶ್ಯವನ್ನು ಹೊತ್ತು ತಂದಿದೆ.

ಪ್ರೇಮಿಗಳ ದಿನಕ್ಕಾಗಿಭರತ್ ಎಸ್ ನಾವುಂದ ನಿರ್ದೇಶನದ'ಮುಗಿಲ್ ಪೇಟೆ' ಚಿತ್ರತಂಡ ಕೂಡ ಕಿಸ್ಸಿಂಗ್‌ ದೃಶ್ಯ ಇರುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ ಪುತ್ರ ಮನೋರಂಜನ್‌ ನಾಯಕ ನಟರಾಗಿ ನಟಿಸಿದ್ದಾರೆ.

ತೆಲುಗಿನ 'ಆರ್‌ಎಕ್ಸ್‌100' ಸಿನಿಮಾ ಕನ್ನಡದಲ್ಲಿ ರಿಮೇಕ್‌ ಆಗುತ್ತಿದೆ. ಇದರಲ್ಲಿಧೀರೇನ್ ರಾಮ್‌ಕುಮಾರ್‌, ಮಾನ್ವಿತಾನಟಿಸುತ್ತಿದ್ದಾರೆ. ಈ ಚಿತ್ರಕ್ಕೆ'ಶಿವ 143' ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರತಂಡ ಕೂಡ ಮುತ್ತಿನ ದೃಶ್ಯ ಇರುವ ಪೋಸ್ಟರ್‌ಬಿಡುಗಡೆ ಮಾಡಿದೆ.

ಚಂದನವನ ಮಾತ್ರವಲ್ಲದೆ, ಬಾಲಿವುಡ್‌, ಟಾಲಿವುಡ್‌ ಹಾಗೂ ತಮಿಳು ಸಿನಿಮಾಗಳ ಹಲವು ಪೋಸ್ಟರ್‌, ಟೀಸರ್‌ಗಳನ್ನು ಬಿಡುಗಡೆಮಾಡಿವೆ. ಈ ಪೋಸ್ಟರ್‌ ಮತ್ತು ಟೀಸರ್‌ಗಳಲ್ಲೂ ಮುತ್ತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.