ADVERTISEMENT

'ಯಶೋದಾ' ಚಿತ್ರ ತಂಡ ಸೇರಿಕೊಂಡ ವರಲಕ್ಷ್ಮಿ: ಸದ್ಯದಲ್ಲೇ ಬರಲಿದ್ದಾರೆ ಸಮಂತಾ

ಐಎಎನ್ಎಸ್
Published 16 ಡಿಸೆಂಬರ್ 2021, 9:22 IST
Last Updated 16 ಡಿಸೆಂಬರ್ 2021, 9:22 IST
ವರಲಕ್ಷ್ಮೀ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರ
ವರಲಕ್ಷ್ಮೀ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರ   

ಹೈದರಾಬಾದ್: ಸಮಂತಾ ನಟಿಸುತ್ತಿರುವ ‘ಯಶೋದಾ’ಚಿತ್ರ ತಂಡಕ್ಕೆ ತಮಿಳು ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಸೇರಿಕೊಂಡಿದ್ದಾರೆ.

ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ವರಲಕ್ಷ್ಮೀ ಸಹ ಪ್ರಮುಖಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ವರಲಕ್ಷ್ಮೀ ಶರತ್ ಕುಮಾರ್ ಅವರು ಸಮಂತಾ ರುತ್ ಪ್ರಭು ಅವರ ಜೊತೆ ತೆರೆ ಹಂಚಿಕೊಳ್ಖುತ್ತಿದ್ಧಾರೆ.

ADVERTISEMENT

ಕನ್ನಡದ ಮಾಣಿಕ್ಯ, ವಿಸ್ಮಯಾ ಚಿತ್ರಗಳಲ್ಲೂ ವರಲಕ್ಷ್ಮೀ ಅಭಿನಯಿಸಿದ್ದರು. ಮಾರ್ಚ್ 2022ರ ವೇಳೆಗೆ ಚಿತ್ರದ ಶೂಟಿಂಗ್ ಮುಗಿಸಿ ತೆರೆಗೆ ತರಲು ನಿರ್ಮಾಪಕರು ಉದ್ದೇಶಿಸಿದ್ದಾರೆ ಎಂದು ವರದಿಯಾಗಿದೆ.

ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಹಿಂದಿ, ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇತ್ತೀಚೆಗೆ, ಪೌರಾಣಿಕ ಚಿತ್ರ ‘ಶಕುಂತಲಂ’ಚಿತ್ರೀಕರಣವನ್ನು ಮುಗಿಸಿರುವ ಸಮಂತಾ, ಸದ್ಯದಲ್ಲೇ ‘ಯಶೋದಾ’ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.