ADVERTISEMENT

ʻವಸಂತ ಕೋಕಿಲʼ ಫಸ್ಟ್‌ ಲುಕ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 12:33 IST
Last Updated 11 ನವೆಂಬರ್ 2020, 12:33 IST
ವಸಂತ ಕೋಕಿಲ ಚಿತ್ರದ ಪೋಸ್ಟರ್‌
ವಸಂತ ಕೋಕಿಲ ಚಿತ್ರದ ಪೋಸ್ಟರ್‌   

ಬಾಬಿ ಸಿಂಹ (ಜಯಸಿಂಹ) ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.

ಬಾಬಿ ಸಿಂಹರ ಜನ್ಮದಿನದಂದು (ನ. 6) ಈ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ನಟ ರಕ್ಷಿತ್‌ ಶೆಟ್ಟಿ ಟ್ವಿಟರ್‌ ಖಾತೆ ಮೂಲಕ ಫಸ್ಟ್‌ಲುಕ್‌ ಬಿಡುಗಡೆ ಮಾಡಿದರು.

ಎಸ್‌ಆರ್‌ಟಿಎಂಟರ್‌ಟೈನ್‌ಮೆಂಟ್ಸ್‌, ಮುದ್ರಾ ಫಿಲ್ಮ್‌ ಫ್ಯಾಕ್ಟರಿ ಬ್ಯಾನರ್‌ ಜಂಟಿಯಾಗಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿಈ ಚಿತ್ರ ಬಿಡುಗಡೆಯಾಗುತ್ತಿದೆ. ರಾಮ್‌ ತಳ್ಲೂರಿ ಚಿತ್ರದ ನಿರ್ಮಾಪಕರು. ರಮಣನ್‌ ಪುರುಷೋತ್ತಮ ನಿರ್ದೇಶನವಿದೆ.ನಾಯಕಿಯಾಗಿ ಕಾಶ್ಮೀರ ಪರ್ದೇಶಿ ಅಭಿನಯಿಸುತ್ತಿದ್ದಾರೆ.

ADVERTISEMENT

ತೆಲುಗು ಭಾಷೆಯ ಫಸ್ಟ್‌ಲುಕ್‌ನ್ನು‘ಬಾಹುಬಲಿ’ ಖ್ಯಾತಿಯ ರಾಣಾ ಹಾಗೂ ತಮಿಳು ಭಾಷೆಯ ಫಸ್ಟ್‌ಲುಕ್‌ ಪೋಸ್ಟರ್‌ನ್ನ ಖ್ಯಾತ ನಟ ಧನುಷ್‌ ಆನ್‌ಲೈನ್‌ ಮೂಲಕ ಬಿಡುಗಡೆ ಮಾಡಿದರು. ರೊಮ್ಯಾಂಟಿಕ್‌‌ ಥ್ರಿಲ್ಲರ್‌ ಎಳೆಯಲ್ಲಿಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಥಿಂಕ್‌ ಮ್ಯೂಸಿಕ್‌ ಈ ಚಿತ್ರದ ಆಡಿಯೋ ಹಕ್ಕುಗಳನ್ನ ಹೊಂದಿದೆಎಂದು ನಿರ್ಮಾಪಕ ರಾಮ್‌ ತಳ್ಲೂರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.