ADVERTISEMENT

ವೀರಂ ಫಸ್ಟ್ ಲುಕ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 13:42 IST
Last Updated 18 ಸೆಪ್ಟೆಂಬರ್ 2019, 13:42 IST
ಅರ್ಜುನ್‌ ಗೌಡ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್
ಅರ್ಜುನ್‌ ಗೌಡ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್   

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್‌ ದೇವರಾಜ್‌ ನಟಿಸುತ್ತಿರುವ ‘ವೀರಂ’ ಸಿನಿಮಾದ ಫಸ್ಟ್‌ ಲುಕ್‌ ಮತ್ತು ಟೈಟಲ್‌ ಲುಕ್‌ಪೋಸ್ಟರ್‌ ಅನ್ನು ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದಂದು ಬುಧವಾರ ನಟ ದರ್ಶನ್‌ ಬಿಡುಗಡೆ ಮಾಡಿದ್ದಾರೆ.

ಖದರ್‌ ಕುಮಾರ್‌ ಈ ಚಿತ್ರನಿರ್ದೇಶಿಸುತ್ತಿದ್ದು, ದಿಶಾ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಪಾರ್ವತಮ್ಮ ನಿರ್ಮಿಸುತ್ತಿದ್ದಾರೆ. ಪ್ರಜ್ವಲ್‌ಗೆ ಇದು 35ನೇ ಸಿನಿಮಾ. ಬಹುಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಶುಭ ಹಾರೈಸಿರುವ ದರ್ಶನ್‌, ‘ಪ್ರಜ್ವಲ್‌ ಆದಷ್ಟು ಬೇಗ 50ನೇ ಸಿನಿಮಾಕ್ಕೆ ತಲುಪಲಿದ್ದಾರೆ’ ಎಂದು ಬೆನ್ನುತಟ್ಟಿದ್ದಾರೆ.

ADVERTISEMENT

ನರಸಿಂಹ ನಿರ್ದೇಶನದ ‘ಇನ್ಸ್‌ಪೆಕ್ಟರ್ ವಿಕ್ರಂ’, ಲಕ್ಕಿ ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಚಿತ್ರಗಳನ್ನು ಪೂರ್ಣಗೊಳಿಸಿರುವ ಪ್ರಜ್ವಲ್ ಸದ್ಯ, ಜಡೇಶ್ ಕುಮಾರ್ ನಿರ್ದೇಶನ ಮತ್ತು ಗುರು ದೇಶಪಾಂಡೆ ನಿರ್ಮಾಣದ ‘ಜಂಟಲ್ ಮ್ಯಾನ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.