
ಬಹುತೇಕ ಹೊಸಬರಿಂದಲೇ ಕೂಡಿರುವ ‘ವಿನಾಶ ಕಾಲೆ ವಿಪರೀತ ಬುದ್ಧಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಎಸ್.ಕಿರಣ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಶಕ್ತಿ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.
‘ಅಗಲಿದ ಗೆಳೆಯನೊಬ್ಬನ ಜೀವನದಲ್ಲಿ ನಡೆದಂಥ ಸತ್ಯ ಘಟನೆಯನ್ನೇ ಚಿತ್ರವಾಗಿಸುತ್ತಿದ್ದೇನೆ. ವೇಗವಾಗಿ ದುಡ್ಡು ಮಾಡಬೇಕೆಂಬ ದುರಾಸೆಯಿಂದ ದೈವದ ಸಂಪತ್ತಿಗೆ ಕೈ ಹಾಕಿದರೆ ಏನೇನು ಅನಾಹುತಗಳು ನಡೆಯುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳುತ್ತೇವೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಐದು ಹುಡುಗರು ಮತ್ತು ಹುಡುಗಿಯರು ಉದ್ಯೋಗ ಅರಸಿಕೊಂಡು ನಗರಕ್ಕೆ ಬರುತ್ತಾರೆ. ಸಂಬಳ ಸಾಕಾಗದೆ ಶ್ರೀಮಂತರಾಗಲು ಬೇರೆ ಹಾದಿ ಹಿಡಿಯುತ್ತಾರೆ. ಅದರ ಸುತ್ತ ಕಥೆ ಸಾಗುತ್ತದೆ’ ಎಂದರು ನಿರ್ದೇಶಕ.
ಪಾವನಿ ಸಿರಿ, ರಿಷಿಕ ಗೌಡ, ವೈಷ್ಣವಿ, ಶ್ರೀನಿಧಿ, ರಚನಾ, ಶೋಭ, ಮಂಡ್ಯ ಸಿದ್ದು, ‘ಬಿಗ್‌ಬಾಸ್’ ಖ್ಯಾತಿಯ ಮಲ್ಲಮ್ಮ ಮುಂತಾದವರು ಚಿತ್ರದಲ್ಲಿದ್ದಾರೆ. ಮಾರ್ಚ್‌ನಿಂದ ಬೆಂಗಳೂರು, ಚಿಕ್ಕಮಗಳೂರು ಮುಂತಾದೆಡೆ ಚಿತ್ರೀಕರಣ ನಡೆಸಲು ತಂಡ ಆಲೋಚಿಸಿದೆ.
ಮೂರು ಹಾಡುಗಳಿಗೆ ಮಂಜು ಕವಿ ಸಾಹಿತ್ಯ-ಸಂಗೀತ, ವಿನಯ್‌ಗೌಡ ಛಾಯಾಚಿತ್ರಗ್ರಹಣ, ಜೀವನ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.