ADVERTISEMENT

ತಮಿಳು ನಟ ವಿಶಾಲ್‌ಗೆ ಮಹಿಳೆಯಿಂದ ₹ 45 ಲಕ್ಷ ವಂಚನೆ: ಪ್ರಕರಣ ದಾಖಲು

ಏಜೆನ್ಸೀಸ್
Published 5 ಜುಲೈ 2020, 9:57 IST
Last Updated 5 ಜುಲೈ 2020, 9:57 IST
ವಿಶಾಲ್‌
ವಿಶಾಲ್‌   

ಚೆನ್ನೈ‌: ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿರುವ ವಿಶಾಲ್‌ ಅವರಿಗೆ ಮಹಿಳೆಯೊಬ್ಬರು
ಹಣ ಪಡೆದು ವಂಚಿಸಿರುವ ಘಟನೆ ವರದಿಯಾಗಿದೆ.

ವಿಶಾಲ್ ಹೀರೋ ಮಾತ್ರವಲ್ಲ, ನಿರ್ಮಾಪಕರೂ ಹೌದು. ವಿಶಾಲ್ ಕಳೆದ ಏಳು ವರ್ಷಗಳಿಂದ ಎಂಟು ಚಿತ್ರಗಳನ್ನು ನಿರ್ಮಾಣ
ಮಾಡಿದ್ದು, ವಿಶಾಲ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಹಲವು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ ವಿಶಾಲ್ ಚಕ್ರ ಈ
ಚಿತ್ರದಲ್ಲಿ ನಟಿಸುತ್ತಿದ್ದು, ಇದರ ಟೀಸರ್ ಬಿಡುಗಡೆಯಾಗಿದೆ. ಇದು ಅಭಿಮಾನಿಗಳಿಗೆ ಖುಷಿ ತಂದಿದೆ.

ವಿಶಾಲ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಳೆದ ಆರು ವರ್ಷಗಳಲ್ಲಿ 45 ಲಕ್ಷ
ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ವಿಶಾಲ್‌ ಅವರ ಮ್ಯಾನೇಜರ್ ಹರಿ ಕುಮಾರ್‌ ಪೊಲೀಸರಿಗೆ
ದೂರು ನೀಡಿದ್ದಾರೆ.

ADVERTISEMENT

ಸದ್ಯ ಪೊಲೀಸರು ಆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.