ADVERTISEMENT

New Movie: ಐದು ಭಾಷೆಗಳಲ್ಲಿ ‘ಜಿರೋ ಟು ಒನ್‌’

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 0:30 IST
Last Updated 28 ಜನವರಿ 2026, 0:30 IST
<div class="paragraphs"><p>ಜಿರೋ ಟು ಒನ್‌</p></div>

ಜಿರೋ ಟು ಒನ್‌

   

ನಾಗವೇಣಿ ಸಂತೋಷ್‌ ನಿರ್ದೇಶಿಸಿ, ನಟಿಸುತ್ತಿರುವ ‘ಜಿರೋ ಟು ಒನ್‌’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಈ ಚಿತ್ರವು ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳಲಿದ್ದು, ಐದು ಭಾಷೆಗಳಲ್ಲಿ ತೆರೆಕಾಣಲಿದೆ. 

‘ನನ್ನ ಹದಿಮೂರು ವರ್ಷಗಳ ಕನಸಿದು. ಚಿತ್ರರಂಗಕ್ಕೆ ಬರಬೇಕೆಂದು ಬಹಳ ಕಷ್ಟಪಟ್ಟೆ. ಯಾರೂ ಇಲ್ಲಿ ಬೆಂಬಲಕ್ಕೆ ಬರಲಿಲ್ಲ. ಅದಕ್ಕೆ ನಾನೇ ಧೈರ್ಯ ಮಾಡಿ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದೆ. ಮುಂಬೈನಲ್ಲಿ ಚಿತ್ರದ ಕೆಲಸ ಪ್ರಾರಂಭಿಸಿದೆ. ಹಿಂದಿಯಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಆದರೆ ಕನ್ನಡ ಮಾತೃಭಾಷೆ. ಹೀಗಾಗಿ ಮೊದಲು ಇಲ್ಲಿಗೆ ಆದ್ಯತೆ. ನಂತರ ಹಿಂದಿಯಲ್ಲಿ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುವೆ. ಈ ಸಿನಿಮಾ ಇದೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಿಸಿ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ತೆರೆಗೆ ತರುವ ಆಲೋಚನೆ ಇದೆ’ ಎಂದರು ಸಂತೋಷ್‌.

ADVERTISEMENT

ಮನಿಷಾ ಭಟ್ ಚಿತ್ರದ ನಾಯಕಿ. ಎ.ಯು.ಮೂವೀಸ್ ಮೂಲಕ ನಿರ್ದೇಶಕರೇ ಬಂಡವಾಳವನ್ನು ಹೂಡುತ್ತಿದ್ದಾರೆ. ರಕ್ಷಿತಾ ಗೌಡ, ಸುಮಾ, ನಕ್ಷತ್ರ, ರಿತ್ವಿಕಾ ಮುಂತಾದವರು ತಾರಾಗಣದಲ್ಲಿದ್ದಾರೆ. ವೆಂಕಟೇಶ ನಾಕಿ ಛಾಯಾಚಿತ್ರಗ್ರಹಣ, ರಾಹುಲ್‌ ವಸಿಷ್ಠ ಸಂಕಲನ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.