ADVERTISEMENT

‘ಜಿಂದಗಿ ನಾ ಮಿಲೇಗಿ ದುಬಾರಾ' ಯಶಸ್ಸಿಗೆ ಎಂಟು ವರ್ಷ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:45 IST
Last Updated 16 ಜುಲೈ 2019, 19:45 IST
ಜಿಂದಗಿ ನಾ ಮಿಲೇಗಿ ದುಬಾರ ಚಿತ್ರದ ದೃಶ್ಯ
ಜಿಂದಗಿ ನಾ ಮಿಲೇಗಿ ದುಬಾರ ಚಿತ್ರದ ದೃಶ್ಯ   

2001ರಲ್ಲಿ ‘ದಿಲ್‌ ಚಾಹತಾ ಹೈ’ ಬಿಡುಗಡೆಯಾದಾಗ ಇಂತದ್ದೊಂದು ಸಿನಿಮಾ ಮತ್ತೆ ಬರಬೇಕು ಎಂಬ ಅಭಿಮಾನಿಗಳ ಕನಸು ನನಸಾಗಿದ್ದು 2011ರಲ್ಲಿ.

‘ದಿಲ್‌ ಚಾಹತಾ ಹೈ’ ಹಿಟ್ ಆದ 10 ವರ್ಷಗಳ ಬಳಿಕ ‘ಜಿಂದಗಿ ನಾ ಮಿಲೇಗಿ ದುಬಾರ’ ಬಾಲಿವುಡ್‌ನ ಸ್ಮರಣೀಯ ಸಿನಿಮಾಗಳಲ್ಲಿ ಒಂದಾಯಿತು. ಈ ಚಿತ್ರ ಬಿಡುಗಡೆಯಾಗಿ ಎಂಟು ವರ್ಷಗಳಾಗಿವೆ. ಈ ಖುಷಿಯನ್ನು ಚಿತ್ರತಂಡ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಹಂಚಿಕೊಂಡಿದೆ.

ಹೃತಿಕ್‌ ರೋಷನ್‌, ಫರ್ಹಾನ್‌ ಅಖ್ತರ್‌, ಅಭಯ್‌ ಡಿಯೋಲ್‌, ಕತ್ರಿನಾ ಕೈಫ್‌, ಕಲ್ಕಿ ನಟನೆ ಈ ಸಿನಿಮಾಕ್ಕಿದೆ. ಯುವಕರ ತಂಡವೊಂದು ಪ್ರವಾಸ ಹೋಗುವಾಗಿನ ಅನುಭವವನ್ನು ಚಿತ್ರಿಸಲಾಗಿದೆ. ಈ ಸಿನಿಮಾದಲ್ಲಿರುವ ಸಂದೇಶ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ ಎಂದು ತಂಡ ಹೇಳಿಕೊಂಡಿದೆ. ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ವಿಷಯಕ್ಕೆ ಭಯ ಪಡುತ್ತಾರೆ. ಆದರೆ ಸಿಕ್ಕ ಒಂದು ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮತ್ತೊಮ್ಮೆ ಈ ಜೀವನ ಸಿಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಿನಿಮಾ ಒಳಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.