ADVERTISEMENT

ತಮ್ಮ ಆಸ್ತಿಯನ್ನು ಎಸ್‌ಬಿಐಗೆ ಬಾಡಿಗೆಗೆ ನೀಡಿದ ನಟ ಅಮಿತಾಭ್ ಬಚ್ಚನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 12:07 IST
Last Updated 9 ಅಕ್ಟೋಬರ್ 2021, 12:07 IST
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್   

ಬೆಂಗಳೂರು: ಖ್ಯಾತ ನಟ ಅಮಿತಾಭ್ಬಚ್ಚನ್ ಅವರು ತಮ್ಮ ಮನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಬಾಡಿಗೆ ನೀಡಿದ್ದು ಸುದ್ದಿಯಾಗಿದೆ.

ಜುಹುವಿನಲ್ಲಿರುವತಮ್ಮ ನೆಚ್ಚಿನ ‘ಜಲ್ಸಾ‘ ಮನೆಯ ಸನಿಹದಲ್ಲಿರುವ ‘ಅಮ್ಮು‘ ಹಾಗೂ ‘ವಾತ್ಸಾ‘ ಬಂಗ್ಲೆಗಳನ್ನು ಬಾಡಿಗೆ ನೀಡುವ ನಿರ್ಧಾರವನ್ನುಅಮಿತಾಭ್ ಕೈಗೊಂಡಿದ್ದಾರೆ ಎಂದು ಮನಿ ಕಂಟ್ರೋಲ್.ಕಾಮ್ ವರದಿ ಮಾಡಿದೆ.

ಇವುಗಳಿಗೆ ಪ್ರತಿ ತಿಂಗಳು ₹18.9 ಲಕ್ಷ ಬಾಡಿಗೆ ನೀಡುವ ಒಪ್ಪಂದವನ್ನು ಎಸ್‌ಬಿಐ15 ವರ್ಷಕ್ಕೆ ಮಾಡಿಕೊಂಡಿದೆ. ಎಸ್‌ಬಿಐ ಈ ಕಟ್ಟಡಗಳನ್ನು ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಬಳಸಲಿದೆ ಎಂದು ವರದಿ ತಿಳಿಸಿದೆ.

ADVERTISEMENT

ಅಲ್ಲದೇ ಇದಕ್ಕಾಗಿ 2.26 ಕೋಟಿ ಮುಂಗಡ ಹಣವನ್ನು ಎಸ್‌ಬಿಐ ನೀಡಿದ್ದು, ಪ್ರತಿ ಐದು ವರ್ಷಕ್ಕೆ ಶೇ 25 ರಷ್ಟು ಬಾಡಿಗೆ ಹೆಚ್ಚಳವಾಗಲಿದೆ ಎಂದು ವರದಿ ತಿಳಿಸಿದೆ.

ಸೆಪ್ಟೆಂಬರ್ 28 ರಂದು ಒಪ್ಪಂದ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.