ADVERTISEMENT

ಕಾಫಿ ನಾಡು ಚಂದು ‘ಬಿಗ್‌ಬಾಸ್‌‘ ಮನೆಗೆ ಹೋಗಬೇಕು: ಅಭಿಯಾನ ಶುರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2022, 6:28 IST
Last Updated 13 ಆಗಸ್ಟ್ 2022, 6:28 IST
ಕಾಫಿ ನಾಡು ಚಂದು
ಕಾಫಿ ನಾಡು ಚಂದು   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿರುವ ಕಾಫಿ ನಾಡು ಚಂದು ‘ಬಿಗ್‌ಬಾಸ್‌‘ ಮನೆಗೆ ಹೋಗಬೇಕು ಎಂದು ಅಭಿಯಾನ ಶುರುವಾಗಿದೆ.

‘ನಾನು ಶಿವಣ್ಣ...ಪುನೀತಣ್ಣ ಅವರ ಅಭಿಮಾನಿ...’ ಎಂದು ಹೇಳಿನಮಸ್ಕಾರ ಮಾಡುವ, ಜನರಿಗೆ ಜನ್ಮದಿನಕ್ಕೆ ಹಾಡು ಹೇಳುವಮೂಲಕ ಕಾಫಿ ನಾಡು ಚಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂ‍ಪಾದಿಸಿದ್ದಾರೆ.

ಸದ್ಯ ಅವರು ‘ಬಿಗ್‌ಬಾಸ್‌‘ ಮನೆಗೆ ಹೋಗಬೇಕು ಎಂಬುದು ಅವರ ಬೆಂಬಲಿಗರಒತ್ತಾಸೆಯಾಗಿದೆ. ಇದಕ್ಕೆ ‘ಕಾಫಿನಾಡು‘ ಚಂದು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ADVERTISEMENT

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಫಿ ನಾಡು ಚಂದು ಅವರು ‘ವೈಲ್ಡ್‌ ಕಾರ್ಡ್‌‘ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಮಾಡಬೇಕು ಎಂದು ಬೆಂಬಲಿಗರು ವಿಡಿಯೊ ಮೂಲಕ ಅಭಿಯಾನ ಶುರು ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳನ್ನು ಪ್ರಕಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.