ADVERTISEMENT

ಭಾರತದಲ್ಲಿನ ತನ್ನ ವ್ಯವಹಾರ ಮಾದರಿ ಯಶಸ್ವಿ ಎಂದ ನೆಟ್‌ಫ್ಲಿಕ್ಸ್‌

ಪಿಟಿಐ
Published 19 ಏಪ್ರಿಲ್ 2023, 5:40 IST
Last Updated 19 ಏಪ್ರಿಲ್ 2023, 5:40 IST
ನೆಟ್‌ಫ್ಲಿಕ್ಸ್‌
ನೆಟ್‌ಫ್ಲಿಕ್ಸ್‌   

ನವದೆಹಲಿ: ಭಾರತದಲ್ಲಿ ತನ್ನ ವ್ಯವಹಾರ ಮಾದರಿ ಯಶಸ್ವಿಯಾಗಿದೆ ಎಂದು ಹೇಳಿರುವ ಜನಪ್ರಿಯ ಒಟಿಟಿ ಫ್ಲೇಯರ್ ನೆಟ್‌ಫ್ಲಿಕ್ಸ್‌, 116 ದೇಶಗಳಲ್ಲಿ ಚಂದಾದಾರಿಕೆಯ ದರವನ್ನು ಕಡಿತಗೊಳಿಸಲು ಮುಂದಾಗಿದೆ.

2021 ರಿಂದ ಕಡಿಮೆ ದರದಲ್ಲಿ ಚಂದಾದಾರಿಕೆ ನೀಡುವುದನ್ನು ಭಾರತದಲ್ಲಿ ಜಾರಿಗೊಳಿಸಿದ್ದರಿಂದ ಪ್ರತಿ ವರ್ಷ ನೆಟ್‌ಫ್ಲಿಕ್ಸ್‌ನ ಆದಾಯ ಹಾಗೂ ಗ್ರಾಹಕರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಾ ಬಂದಿದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರ ಪಾಲ್ಗೊಳ್ಳುವಿಕೆ ಶೇ 30 ರಷ್ಟು ಹೆಚ್ಚಳವಾಗಿದ್ದರೆ, ಆದಾಯ ಶೇ 24 ರಷ್ಟು ಹೆಚ್ಚಳವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ 116 ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯ ಶುಲ್ಕವನ್ನು ಮುಂದಿನ ತ್ರೈಮಾಸಿಕದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದೆ.

ADVERTISEMENT

ಜಾಗತಿಕವಾಗಿ ನೆಟ್‌ಫ್ಲಿಕ್ಸ್‌ನ ಚಂದಾದಾರರ ಸಂಖ್ಯೆ ಪ್ರತಿ ವರ್ಷ ಶೇ 4.9 ರ ದರದಲ್ಲಿ ಹೆಚ್ಚಳವಾಗುತ್ತಾ ಹೊರಟಿದ್ದು ಸದ್ಯ 23 ಕೋಟಿ ಚಂದಾದಾರರಿದ್ದಾರೆ ಎಂದು ಮಾಹಿತಿ ನೀಡಿದೆ.

ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಚಂದಾದಾರಿಕೆ ಶುಲ್ಕ ಪ್ರತಿ ತಿಂಗಳಿಗೆ

ಮೊಬೈಲ್ ₹149

ಬೇಸಿಕ್ ₹199

ಸ್ಟ್ಯಾಂಡರ್ಡ್ ₹499

ಪ್ರಿಮೀಯಮ್ ₹649

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.