ಈ ವಾರ ಒಟಿಟಿಯಲ್ಲಿ ನೋಡಬಹುದಾದ ಇಂಟ್ರಸ್ಟಿಂಗ್ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ
ಬೆಂಗಳೂರು: ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ವೀಕ್ಷಣೆಗೆ ಸಿಗುತ್ತಿದ್ದು, ವಾರಾಂತ್ಯದಲ್ಲಿ ಮನರಂಜನೆಯ ಮಹಾಪೂರವೇ ದೊರಕಲಿದೆ.
ವಿವಿಧ ಭಾಷೆಗಳ ಕ್ರೈಮ್, ಥ್ರಿಲ್ಲರ್, ಹಾಸ್ಯ ಹೀಗೆ ವಿವಿದ ಜಾನರ್‌ಗಳ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ.
ಕೇರಳ ಕ್ರೈಮ್ ಪೈಲ್ಸ್ ಸೀಸನ್ 2
ಜಿಯೊ ಹಾಟ್‌ಸ್ಟಾರ್‌ನಲ್ಲಿ ಜೂನ್ 20ರಂದು ಈ ವೆಬ್ ಸರಣಿ ಬಿಡುಗಡೆಯಾಗುತ್ತಿದೆ. ಅರ್ಜುನ್ ರಾಧಾಕೃಷ್ಣನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮಲಯಾಳ ಭಾಷೆಯಲ್ಲಿ ತೆರೆಕಂಡಿದೆ.
ಗ್ರೌಂಡ್ ಜೀರೊ
ಇಮ್ರಾನ್ ಹಶ್ಮಿ ನಟನೆಯ ಗ್ರೌಂಡ್ ಜೀರೋ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ.
ಪ್ರೈಮ್ ವಿಡಿಯೊದಲ್ಲಿ ಸಿನಿಮಾ ಜೂನ್ 20 ರಂದು ತೆರೆಕಂಡಿದ್ದು ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ಪ್ರಿನ್ಸ್ & ಫ್ಯಾಮಿಲಿ
ಮಲಯಾಳ ಭಾಷೆಯ ಹಾಸ್ಯ ಚಲನಚಿತ್ರವಾಗಿರುವ ಪ್ರಿನ್ಸ್ & ಫ್ಯಾಮಿಲಿ ಜೂನ್ 20ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಕುಟುಂಬವೊಂದರಲ್ಲಿ ನಡೆಯುವ ಘಟನೆಗಳ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.
ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 3
ಈ ವಾರದಿಂದ ಕಪಿಲ್ ಶರ್ಮಾ ಅವರ ಹಾಸ್ಯ ಕಾರ್ಯಕ್ರಮ ಆರಂಭವಾಗುತ್ತಿದೆ. ಈ ಸೀಸನ್‌ನಲ್ಲಿ ವಜೋತ್ ಸಿಂಗ್ ಸಿಧು ಮತ್ತು ಅರ್ಚನಾ ಪುರಾಣ್ ಸಿಂಗ್ ಕಪಿಲ್‌ಗೆ ಜೊತೆಯಾಗಿದ್ದಾಅರೆ.
ನೆಟ್‌ಫ್ಲಿಕ್ಸ್‌ನಲ್ಲಿ ಸಂಚಿಕೆಗಳು ಪ್ರಸಾರವಾಗುತ್ತವೆ. ಜೂನ್ 21 ರಿಂದ ಆರಂಭವಾಗಲಿದೆ.
ನಾಳೆ ರಜಾ ಕೋಳಿ ಮಜಾ
ಕನ್ನಡದ ‘ನಾಳೆ ರಜಾ ಕೋಳಿ ಮಜಾ’ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಸಿಗುತ್ತಿದೆ. ಅಭಿಲಾಶ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರ ಒಂದೂವರೆ ಗಂಟೆಯದ್ದಾಗಿದೆ. ಶಾಂತಿ, ಅಹಿಂಸೆಯ ಪ್ರತೀಕವಾದ ಗಾಂಧಿ ಜಯಂತಿಯಂದು ಎಲ್ಲಿಯೂ ಸಾರಿಗೆ ಕೋಳಿ ಸುಲಭವಾಗಿ ಸಿಗುವುದಿಲ್ಲ. ಹೀಗಾಗಿ ಬಾಲಕಿಯೊಬ್ಬಳು ಸಾರಿಗಾಗಿ ಕೋಳಿ ಹುಡುಕಿಕೊಂಡು ಹೋಗುವುದೇ ಚಿತ್ರಕಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.