ADVERTISEMENT

ಜ್ಞಾನಭಾರತಿ ಆವರಣದಲ್ಲಿ `ದಫನ್'

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪರೀಕ್ಷಾರ್ಥ ಪ್ರಯೋಗವಾಗಿ ಇತ್ತೀಚೆಗೆ ಜ್ಞಾನಭಾರತಿ ಆವರಣದ ಪ್ರೊ.ವೆಂಕಟಗಿರಿ ಸಭಾಂಗಣದಲ್ಲಿ `ದಫನ್' ನಾಟಕ ಪ್ರದರ್ಶಿಸಿದರು.

ಹೂಲಿ ಶೇಖರ್ ಅವರು ರಚಿಸಿದ ಡಾ. ನಾಗೇಶ್ ವಿ. ಬೆಟ್ಟಕೋಟೆ ಅವರ ನಿರ್ದೇಶನದಲ್ಲಿ `ದಫನ್' ನಾಟಕ ಮೂಡಿಬಂದಿತು.

ನಾಟಕ ಮೂರು ದಶಕಗಳ ಮುಂಚೆ ರಚಿಸಿದ್ದಾದರೂ ಪ್ರಸ್ತುತ ಸಮಾಜದಲ್ಲಿನ ಅನೇಕ ಸಮಸ್ಯೆಗಳು ಹಾಗೂ ಅರಾಜಕತೆಗಳ ಚಿತ್ರಣವನ್ನು ಕಟ್ಟಿಕೊಟ್ಟಿತು.

ಶೋಷಣೆ ಹಾಗೂ ಅರಾಜಕತೆಯ ಪ್ರತೀಕವಾದ ಊರ ಗೌಡನ ವಿರುದ್ಧ ಬಂಡಾಯ ಏಳುವ ಯುವಕ ಹಾಗು ಶೋಷಿತರ ಹೋರಾಟ ಅವರ ಸಾವಿನೊಂದಿಗೆ ಮುಗಿಯುತ್ತದೆ. ನಾಟಕ ದುರಂತದಲ್ಲಿ ಕೊನೆಗೊಳ್ಳುತ್ತದಾದರೂ ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕೆಂಬ ಸಂದೇಶವನ್ನು ನಾಟಕ ಸಾರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.