ADVERTISEMENT

`ಸಂಸಾರದಲ್ಲಿ ಸರಿಗಮ'1297ನೇ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

`ಯಶಸ್ವಿ ಕಲಾವಿದರು' ತಂಡದ ಆಶ್ರಯದಲ್ಲಿ ಹಾಸ್ಯನಟ ಸರಿಗಮ ವಿಜಿ ಮತ್ತು ಕಿರುತೆರೆ ನಟಿ ಶ್ರೀದೇವಿ ಅಭಿನಯದ `ಸಂಸಾರದಲ್ಲಿ ಸರಿಗಮ' ನಾಟಕದ 1297ನೇ ಪ್ರದರ್ಶನ ಇಂದು (ಜೂ.24) ಸಂಜೆ 6.15ಕ್ಕೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರದರ್ಶನವನ್ನು ಉದ್ಘಾಟಿಸುವರು. ಶ್ರೀ ರವಿಶಂಕರ ಗುರೂಜಿ, ಸಚಿವ ಅಂಬರೀಶ್, ಸಚಿವೆ ಉಮಾಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸರಿಗಮ ವಿಜಿ ಕಿರುತೆರೆ ನಟ, ನಿರ್ದೇಶಕ. ಯಶಸ್ವಿ ಕಲಾವಿದರು ಹವ್ಯಾಸ ನಾಟಕ ತಂಡ ಕಟ್ಟಿ ರಾಜ್ಯ ಮಾತ್ರವಲ್ಲದೆ ನೆರೆಯ ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಮುಂತಾದ ಮಹಾನಗರಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದಾರೆ.

`ಸಂಸಾರದಲ್ಲಿ ಸರಿಗಮ' ನಾಟಕ ಸತತ ಮೂರು ದಶಕಗಳಿಂದ ಜನಪ್ರಿಯತೆ ಗಳಿಸುತ್ತಲೇ ಸಾಗಿದೆ. ಅಮೆರಿಕಾದಲ್ಲೂ ಪ್ರದರ್ಶನ ಕಂಡಿದೆ. ಈ ನಾಟಕದ ಜನಪ್ರಿಯತೆಯಿಂದಲೇ ಸರಿಗಮ ವಿಜಿ ಎಂದೇ ಖ್ಯಾತರಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.