ಮಕ್ಕಳ ಸರ್ವತೋಮುಖ ಬೆಳವಣಿಗಾಗಿ ಹುಟ್ಟಿಕೊಂಡ ಸರ್ಕಾರೇತರ ಸಂಸ್ಥೆ ‘ಮಂತ್ರ’ ಮಕ್ಕಳಲ್ಲಿ ರಂಗಭೂಮಿ ಚಟುವಟಿಕೆಯನ್ನು ಗರಿಗೆದರಿಸುವ ಉದ್ದೇಶದಿಂದ ‘ರಂಗ ಸಡಗರ’ ತಂಡ ಕಟ್ಟಿಕೊಂಡಿದೆ.
ಈ ತಂಡದಲ್ಲಿರುವ ಸರ್ಕಾರಿ ಶಾಲೆಯ 150 ಮಕ್ಕಳು ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 3 ಮತ್ತು 4ರಂದು ‘ಸಾವಿರದ ರಾಮಾಯಣ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಸುಮಾರು 12 ಸರ್ಕಾರಿ ಶಾಲೆಯ 150 ಮಕ್ಕಳಿಗೆ ‘ಹಾದಿಬದಿ’ ಸಂಸ್ಥೆ ನಾಟಕ
ತರಬೇತಿ ನೀಡಿದೆ. ಒಟ್ಟು 25 ದಿನಗಳ ಕಾಲ ಮಕ್ಕಳಿಗೆ ರಂಗದ ವಿವಿಧ ವಿಭಾಗಗಳ ಪರಿಚಯ ಮಾಡಿಕೊಡಲಾಗಿದೆ.
ಪ್ರಯೋಗದ ಪರಿಕಲ್ಪನೆ ಮತ್ತು ನಿರ್ದೇಶನ–ರವಿಕಿರಣ್ ರಾಜೇಂದ್ರನ್.ಮೇ 3ರಂದು ಸಂಜೆ 5ಕ್ಕೆ, ಮೇ 4ರಂದು ಬೆಳಿಗ್ಗೆ 10ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.