ADVERTISEMENT

‘ಇಲ್ಲ ಅಂದ್ರೆ ಇದೆ’ ನಾಟಕ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:00 IST
Last Updated 30 ಜನವರಿ 2019, 20:00 IST
ನಾಟಕದ ದೃಶ್ಯ
ನಾಟಕದ ದೃಶ್ಯ   

ಸೈಡ್‌ವಿಂಗ್‌ ರಂಗ ತಂಡದ ವತಿಯಿಂದ ‘ಇಲ್ಲ ಅಂದ್ರೆ ಇದೆ’ ನಾಟಕ ಪ್ರದರ್ಶನಗೊಳ್ಳಲಿದೆ.

ಫೆಬ್ರುವರಿ 2ರಂದು ಎನ್‌.ಆರ್‌.ಕಾಲೊನಿಯ ಪ್ರಾಭಾತ್‌ ಕಲಾಪೂರ್ಣಿಮಾದಲ್ಲಿ ಸಂಜೆ 5 ಮತ್ತು 7.30ಕ್ಕೆ ಎರಡು ಪ್ರದರ್ಶನ ನಡೆಯಲಿದೆ. ಟಿಕೆಟ್‌ ಬೆಲೆ ₹100

ಎಂ.ಎಂ.ಶೈಲೇಶ್‌ ಕುಮಾರ್‌ ಅವರು ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ. ಸ್ತ್ರೀವಾದ ಎಂದರೆ ಪುರುಷರನ್ನು ದ್ವೇಷಿಸುವುದು ಎಂಬ ಭಾವನೆಯನ್ನು ಈ ನಾಟಕ ಹೋಗಲಾಡಿಸುವ ಪ್ರಯತ್ನ ಮಾಡಲಿದೆ. ಹಾಸ್ಯದ ಮೂಲಕ ಸ್ತ್ರೀಯರ ಮನದ ಮಾತುಗಳನ್ನು ಈ ನಾಟಕ ಹೇಳಲಿದೆ.

ADVERTISEMENT

ಈಗಾಗಲೇ ಈ ನಾಟಕ 54 ಪ್ರದರ್ಶನಗಳನ್ನು ಪೂರ್ಣಗೊಳಿಸಿದೆ.ದೇಶ, ವಿದೇಶಗಳ ವಿವಿಧ ಭಾಗಗಳಲ್ಲಿ ಜನರು ನೋಡಿ ಮೆಚ್ಚಿಕೊಂಡಿದ್ದಾರೆ.

ರಂಗಭೂಮಿಯ ಸೆಳೆತಕ್ಕೆ ಒಳಗಾದ ಬಳಿಕ ಶೈಲೇಶ್‌ ಕುಮಾರ್‌ ಅವರು ‘ಸೊಂಡಲ್‌ ಮ್ಯಾನ್‌’, ‘ಸಲಿಲ’, ‘ಕಾಡ್ನಲ್ಲೊಂದೂರಿತ್ತಂತೆ’ ಸೇರಿದಂತೆ ಹಲವು ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಸಮಾನ ಮನಸ್ಕರನ್ನು ಹೊಂದಿರುವ ಸೈಡ್‌ವಿಂಗ್‌ ರಂಗ ತಂಡ ಕೂಡ ಬೀದಿನಾಟಕಗಳಿಂದ ಗುರುತಿಸಿಕೊಂಡಿದೆ. ‘ಇಲ್ಯಾಡ್ಗಣ್ಣ’, ‘ಎ ಮಿಡ್‌ ಸಮ್ಮರ್‌ ಡೇ ಡ್ರೀಮ್ಸ್‌’, ‘ಸಡನ್ನಾಗ್‌ ಸತ್ತೋದ್ರೆ’ ‘ಸ್ವರ್ಗ’ ನಾಟಕಗಳಿಗೆ ಕಲಾವಿದರು ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.