ADVERTISEMENT

ಲಾಕ್ ಡೌನ್ ದಿನಗಳಲ್ಲಿ ಮನೆಯಿಂದ ‘ಆಡಿಷನ್‘ 

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 20:00 IST
Last Updated 16 ಏಪ್ರಿಲ್ 2020, 20:00 IST
ಮನೆಯಿಂದಲೇ ಆಡಿಷನ್
ಮನೆಯಿಂದಲೇ ಆಡಿಷನ್   

ಝೀ ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಹಾಗು ಡ್ರಾಮಾ ಜ್ಯೂನಿಯರ್ಸ್ ಮತ್ತೆ ರಂಜಸಿಲು ನಿಮ್ಮ ಮುಂದೆ ಬರುತ್ತಿವೆ.

ಈಲಾಕ್‌ಡೌನ್‌ ಅವಧಿಯಲ್ಲಿ ಹೇಗೆಆಡಿಷನ್‌ ಮಾಡುತ್ತಾರೆ? ಹೇಗೆ ಕಾರ್ಯಕ್ರಮ ನಡಿಸಿಕೊಡುತ್ತಾರೆ ? ಎಂಬ ಚಿಂತೆಯೇ. ಯೋಚನೆ ಮಾಡಬೇಡಿ. ನಿಮಗೆ ಭಾಗವಹಿಸಲು ಆಸಕ್ತಿ ಇದ್ದರೆ, ನೀವು ಮನೆಯಿಂದಲೇಆಡಿಷನ್‌ನಲ್ಲಿ ಭಾಗವಹಿಸಬಹುದು

ಈಗ ‘ವರ್ಕ್‌ ಫ್ರಂ ಹೋಂ‘ ವ್ಯವಸ್ಥೆ ಇದೆಯಲ್ಲ, ಅದೇ ರೀತಿ ‘ಆಡಿಷನ್‌ ಫ್ರಂ ಹೋಂ‘ ಎಂಬ ವ್ಯವಸ್ಥೆಯನ್ನು ಝೀ ಕನ್ನಡ ವಾಹಿನಿಯವರು ಆಯೋಜಿಸುತ್ತಿದ್ದಾರೆ. ಆಸಕ್ತರು ಮನೆಯಿಂದಲೇಆಡಿಷನ್‌ ಕೊಡಲು ಅವಕಾಶವಿದೆ. ಅತಿ ದೊಡ್ಡ ಎರಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ನಿಮ್ಮ ಮಕ್ಕಳಿಗೆ ಆಸಕ್ತಿ ಇದ್ದರೆ, ನಿಮ್ಮ ಮಕ್ಕಳ ಹಾಡಿನ ಆಡಿಯೊ ಕ್ಲಿಪ್ ಹಾಗೂ ಅಭಿನಯದ ವಿಡಿಯೊ ಕ್ಲಿಪ್‌ ಅನ್ನು ನಮಗೆ ಕಳುಹಿಸಿಕೊಡಿ. ಅಂದ ಹಾಗೆ, ವಾಟ್ಸ್‌ಆ್ಯಪ್ ಮೂಲಕವೇ ನಡೆಯಲಿದೆ ಮೆಗಾಆಡಿಷನ್.

ADVERTISEMENT

ನೀವು ಮಾಡಬೇಕಾಗಿರುವುದು ಇಷ್ಟೇ. ಮೇಲೆ ತಿಳಿಸಿದಂತೆ ನಿಮ್ಮ ಮಕ್ಕಳ ಎರಡು ನಿಮಿಷದ ಹಾಡುಗಾರಿಕೆಯ ಆಡಿಯೊ ತುಣಕನ್ನು (ಸರಿಗಮಪ-18 : 9513134434) ಅಭಿನಯದ ವಿಡಿಯೊವನ್ನು (ಡ್ರಾಮಾ ಜ್ಯೂನಿಯರ್ಸ್-4 : 9538066602 ) ನಮಗೆ ಕಳುಹಿಸಿ ಕೊಡಿ ಎಂದು ಝೀ ವಾಹಿನಿ ಮನವಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.