ADVERTISEMENT

ಕಿರುತೆರೆ ನಟಿ ಚೇತನಾ ರಾಜ್‌ ಸಾವು: ಶಸ್ತ್ರಚಿಕಿತ್ಸೆಗೆ ಪರವಾನಗಿ ಪಡೆಯದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 19 ಮೇ 2022, 4:52 IST
Last Updated 19 ಮೇ 2022, 4:52 IST
   

ಬೆಂಗಳೂರು: ‘ರಾಜಾಜಿನಗರದ ಡಾ. ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್ ಶಸ್ತ್ರಚಿಕಿತ್ಸೆ ನಡೆಸಲು ಪರವಾನಗಿ ಹೊಂದಿರಲಿಲ್ಲ. ಪಾಲಿಕ್ಲಿನಿಕ್ ಪರವಾನಗಿ ಮಾತ್ರ ಹೊಂದಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.

ಅನುಮಾನಾಸ್ಪದವಾಗಿ ಮೃತಪಟ್ಟ ಕಿರುತೆರೆ ನಟಿ ಚೇತನಾ ರಾಜ್, ದೇಹದಲ್ಲಿದ್ದ ಕೊಬ್ಬಿನಾಂಶ (ಫ್ಯಾಟ್) ಕರಗಿಸಿಕೊಳ್ಳಲು ಈ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ‘ಮೇಲ್ನೋಟಕ್ಕೆ ಕಾನೂನಿನ ಉಲ್ಲಂಘನೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಅಧೀನದಲ್ಲಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಸಮಿತಿ ಅಲ್ಲಿನ ವೈದ್ಯಕೀಯ ಸೌಲಭ್ಯದ ಬಗ್ಗೆ ಪರಿಶೀಲಿಸಿ, ಕ್ರಮಕೈಗೊಳ್ಳಲಿದೆ’ ಎಂದು ಡಿ. ರಂದೀಪ್ ಹೇಳಿದರು.

ಕೆಪಿಎಂಇ ಉಪನಿರ್ದೇಶಕ ಡಾ. ವಿವೇಕ್ ದೊರೈ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು,ಜಿಲ್ಲಾ ಆರೋಗ್ಯ
ಅಧಿಕಾರಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ್ದಾರೆ. ಆದರೆ, ಮಂಗಳವಾರದಿಂದಲೇ ಈ ಕೇಂದ್ರ ಬಾಗಿಲು ಮುಚ್ಚಿದೆ.

ADVERTISEMENT

‘ಈ ಸಂಬಂಧ 24 ಗಂಟೆಗಳಲ್ಲಿ ಉತ್ತರಿಸುವಂತೆ ಕೇಂದ್ರಕ್ಕೆ ನೋಟಿಸ್ ನೀಡಲಾಗಿದೆ. ಅವರು ಉತ್ತರ ನೀಡಿ
ದರೂ, ನೀಡದಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧೀನ ಸಮಿತಿಯು ಕೇಂದ್ರದ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಿದೆ. ಕೇಂದ್ರವುಪಾಲಿಕ್ಲಿನಿಕ್ ಪರವಾನಗಿ ಹೊಂದಿದೆ. ಹೆಚ್ಚೆಂದರೆ ಗಾಯ ಅಥವಾ ಶಸ್ತ್ರಚಿಕಿತ್ಸೆಗೆ ಹೊಲಿಗೆ ಹಾಕಬಹುದು’ ಎಂದುಡಾ. ವಿವೇಕ್ ದೊರೈ ತಿಳಿಸಿದರು.‘ಈ ಘಟನೆ ಬಗ್ಗೆ ಪ್ಲಾಸ್ಟಿಕ್‌ ಶಸ್ತ್ರಚಿಕಿತ್ಸಕ ತಜ್ಞರ ಅಭಿಪ್ರಾಯವನ್ನೂ ಪಡೆದು, ಬಳಿಕಡಾ. ಶೆಟ್ಟೀಸ್ ಕಾಸ್ಮೆಟಿಕ್ ಸೆಂಟರ್ ಮುಚ್ಚಿಸಲಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.