ಬೆಂಗಳೂರು: ಬಿಗ್‌ಬಾಸ್ ಕನ್ನಡ 10ನೇ ಆವೃತ್ತಿಯಲ್ಲಿ ಫಿನಾಲೆಯ ಕ್ಷಣಗಣನೆಯಲ್ಲಿ ಆರಂಭವಾಗಿದೆ. ಈ ನಡುವೆ ಆಟ ರೋಚಕತೆ ಪಡೆದಿದೆ.
ಎಂದಿನಂತೆ ಈ ವಾರವೂ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದೆ.
‘ಕಳಪೆ ಅನ್ನು ನಾನು ತುಕಾಲಿ ಸಂತೋಷ್ ಅವರಿಗೆ ಕೊಡುತ್ತೇನೆ’ ಎಂದು ಪ್ರತಾಪ್ ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಆದರೆ ವೋಟಿಂಗ್ ನಂತರದಲ್ಲಿ ವರ್ತೂರು ಮತ್ತು ಪ್ರತಾಪ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ‘ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು’ಎಂದಿರುವ ವರ್ತೂರು, ‘ನಿನ್ನನ್ನು ಯಾರೂ ನಂಬುವುದಿಲ್ಲ’ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ.
ಅಷ್ಟೇ ಅಲ್ಲ, ‘ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು’ ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ, ವರ್ತೂರು ಈ ಮಾತು ಹೇಳಿದ್ದು ಬಿಗ್‌ಬಾಸ್ ಷೋ ಬಗ್ಗೆಯಾ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆಯಾ? ಎಂಬ ಪ್ರಶ್ನೆ ಎದ್ದಿದೆ.
ಈ ನಡುವೆ, ಈ ವಾರದ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ನೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.