ADVERTISEMENT

ಇದು ‘ಕಾಮಿಡಿ ಗ್ಯಾಂಗ್ಸ್‌’ ಉತ್ಸವ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:30 IST
Last Updated 9 ಜೂನ್ 2022, 19:30 IST
‘ಕಾಮಿಡಿ ಗ್ಯಾಂಗ್ಸ್‌ ಉತ್ಸವ’ದ ಝಲಕ್‌
‘ಕಾಮಿಡಿ ಗ್ಯಾಂಗ್ಸ್‌ ಉತ್ಸವ’ದ ಝಲಕ್‌   

ಕಿರುತೆರೆ ಹಿರಿತೆರೆಯ ಎಲ್ಲ ತಾರೆಯರನ್ನು ಮತ್ತೊಮ್ಮೆ ಒಟ್ಟು ಮಾಡಿದೆ ಕಾಮಿಡಿ ಗ್ಯಾಂಗ್ಸ್‌ ಉತ್ಸವ. ಜೂನ್‌ 12ರಂದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸಂಜೆ 7ರಿಂದ ರಾತ್ರಿ 10 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ರಿಷಭ್‌ ಶೆಟ್ಟಿ, ಮಾನ್ವಿತಾ ಕಾಮತ್, ಖುಷಿ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವಾರು ತಾರೆಯರು ಈ ಉತ್ಸವದಲ್ಲಿದ್ದಾರೆ. ನಿರೂಪಕ ಶಿವರಾಜ್ ಕೆ.ಆರ್. ಪೇಟೆ, ತೀರ್ಪುಗಾರರಾದ ಮುಖ್ಯಮಂತ್ರಿ ಚಂದ್ರು, ಶ್ರುತಿ ಹರಿಹರನ್ ಮತ್ತು ಕುರಿ ಪ್ರತಾಪ್ ಅವರ ಅನುಕರಣೆ ಮಾಡುವ ಪ್ರಹಸನ ಪ್ರೇಕ್ಷಕರಿಗೆ ಮನೋರಂಜನೆ ನೀಡಲಿದೆ ಎಂದಿದೆ ವಾಹಿನಿ.

ಗಾಯಕರಾದ ಹರ್ಷ ಮತ್ತು ಅಂಕಿತಾ ಕುಂದು ಅವರ ಗಾಯನವಿದೆ. ಒಟ್ಟಾರೆ 3 ಗಂಟೆಗಳ ಕಾಲ ನಗು, ಹಾಡು, ನೃತ್ಯದ ನಿರಂತರ ಮನರಂಜನೆ ಕಿರುತೆರೆ ವೀಕ್ಷಕರಿಗಾಗಿ ಸಿದ್ಧವಾಗಿದೆ ಎಂದಿದೆ ವಾಹಿನಿಯ ತಂಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.