ADVERTISEMENT

ಚಿಕ್ಕಮಗಳೂರಿನಲ್ಲಿ ‘ಕಸ್ತೂರಿ ನಿವಾಸ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 8:15 IST
Last Updated 17 ಫೆಬ್ರುವರಿ 2021, 8:15 IST
ಚಿಕ್ಕಮಗಳೂರಿನಲ್ಲಿ ‘ಕಸ್ತೂರಿ ನಿವಾಸ’ ಚಿತ್ರೀಕರಣದ ದೃಶ್ಯ
ಚಿಕ್ಕಮಗಳೂರಿನಲ್ಲಿ ‘ಕಸ್ತೂರಿ ನಿವಾಸ’ ಚಿತ್ರೀಕರಣದ ದೃಶ್ಯ   

ಉದಯ ಟಿವಿಯ ಜನಪ್ರಿಯ ಧಾರಾವಾಹಿ ‘ಕಸ್ತೂರಿ ನಿವಾಸ’ 250 ಸಂಚಿಕೆಗಳನ್ನು ಪೂರೈಸಿದೆ. ಧಾರಾವಾಹಿಯ ನಾಯಕ ರಾಘವ್, ನಾಯಕಿ ಮೃದುಲಾಳ ಅವರ ಸಂತೋಷದ ಕ್ಷಣಗಳ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ.

ಕುಟುಂಬದ ಆನಂದ, ಅತ್ತೆ ಸೊಸೆ ಬಾಂಧವ್ಯ ಈ ಧಾರಾವಾಹಿಯ ಪ್ರಮುಖ ಕಥಾ ಅಂಶ. ಈ ಜೋಡಿಯ ಬದುಕಿನಲ್ಲಿ ಹೊಸದೊಂದು ತಿರುವು ಬರುವ ಸನ್ನಿವೇಶವನ್ನು ಈ ಸಂಚಿಕೆಗಳಲ್ಲಿ ನೋಡಬಹುದು.

‘ಕಸ್ತೂರಿ ನಿವಾಸ’ ಚಿತ್ರೀಕರಣದ ದೃಶ್ಯ

ಚಿಕ್ಕಮಗಳೂರಿನ ತಾಣಗಳಾದ ಮುಳ್ಳಯ್ಯನಗಿರಿ, ಕಾಪು ದೀಪಸ್ತಂಭ, ಬಾಬಾ ಬುಡನಗಿರಿ, ಸುಂದರ ಕಾಫಿ ತೋಟಗಳ ನಡುವೆ ಚಿತ್ರಿಕರಣ ಮಾಡಲಾಗಿದೆ. ಉಡುಪಿಯ ಸೇಂಟ್‌ ಮೇರೀಸ್‌ ದ್ವೀಪದಲ್ಲೂ ಚಿತ್ರೀಕರಣ ನಡೆದಿದೆ.

ADVERTISEMENT

ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.