ADVERTISEMENT

ಕೌನ್ ಬನೇಗಾ ಕರೋಡ್‌ಪತಿ: ಮೇ 9ರಿಂದ ನೋಂದಣಿ ಶುರು

​ಪ್ರಜಾವಾಣಿ ವಾರ್ತೆ
Published 3 ಮೇ 2020, 5:57 IST
Last Updated 3 ಮೇ 2020, 5:57 IST
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್   

ಮುಂಬೈ: ಕೌನ್ ಬನೇಗಾ ಕರೋಡ್‌ಪತಿಯ 12ನೇ ಆವೃತ್ತಿಗೆ ನೋಂದಣಿ ಮೇ.9ರಂದು ಶುರುವಾಗಲಿದೆ.ಸೋನಿ ಟಿವಿಯ ಟ್ವೀಟ್‌ನ್ನು ರಿಟ್ವೀಟ್ ಮಾಡಿರುವ ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್, ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.

ಎಲ್ಲದಕ್ಕೂ ಒಂದು ವಿರಾಮ ಇರುತ್ತದೆ. ರಸ್ತೆಯ ಮೂಲೆಯಲ್ಲಿ ಕುಡಿಯುವ ಚಹಾಕ್ಕೂ, ಚಹಾದ ವೇಳೆ ಹೇಳುವ ಹಾಯ್,ಹಲೋಗಳಿಗೂ. ರಸ್ತೆಯಲ್ಲಿ ಸಾಗುವ ಗೆಳೆತನ ಮತ್ತು ಟ್ರಿಪಲ್ ಸೀಟ್ ಸವಾರಿಗೂ. ಎಲ್ಲದಕ್ಕೂ ವಿರಾಮ ಸಂಭವಿಸಬಹುದು. ಆಫೀಸಿನ ಕೆಲಸಕ್ಕೂ, ಮಧ್ಯ ರಾತ್ರಿ ಅಡ್ಡಾಡುವುದಕ್ಕೂ, ಶಾಪಿಂಗ್ ಮಾಲ್‌ನ ಪ್ರೀತಿ, ಅಡ್ಡರಸ್ತೆಯ ಗೆಳೆತನಕ್ಕೆ ಎಲ್ಲದಕ್ಕೂ ವಿರಾಮ ಸಂಭವಿಸಬಹುದು. ಬೆಳಗ್ಗಿನ ಶಾಲೆಗೆ, ರಸ್ತೆಯ ದೂಳು, ಯೌವನದ ಓಡಾಟ, ಕಾನ್ಫರೆನ್ಸ್ ರೂಮಿನ ತಮಾಷೆ, ಗಾಡಿಯ ಟಿಕ್ ಟಿಕ್ ಸದ್ದಿಗೆ, ಶತಾಬ್ದಿಯ ಜಿಕ್ ಜಿಕ್‌ಗೆ, ರೈಲಿನ ಹಾಹಾಕಾರಕ್ಕೆ, ಎದೆಬಡಿತದ ವೇಗಕ್ಕೆ, ಎಲ್ಲದಕ್ಕೂ ವಿರಾಮ ಸಂಭವಿಸಬಹುದು. ಆದರೆ ಒಂದು ವಿಷಯಕ್ಕೆ ಮಾತ್ರ ವಿರಾಮ ಹಾಕಬಾರದು- ಅದು ಕನಸು.ಕನಸುಗಳ ಹಾರಾಟಕ್ಕಾಗಿ ಬರುತ್ತಿದೆ ನನ್ನ ಪ್ರಶ್ನೆ ಮತ್ತು ನಿಮ್ಮ ಕೆಬಿಸಿ ನೋಂದಣಿ. ಮೇ9ರಂದು ರಾತ್ರಿ 9ಗಂಟೆಗೆ ಸೋನಿ ಟಿವಿಯಲ್ಲಿ ಮಾತ್ರ ಎಂದು ಅಮಿತಾಬ್ ಬಚ್ಚನ್ ಹೇಳುತ್ತಿರುವ ಕಾರ್ಯಕ್ರಮದಪ್ರೊಮೋವನ್ನು ಸೋನಿ ಟಿವಿ ಟ್ವೀಟಿಸಿದೆ.

ಈ ಪ್ರೊಮೋ ಲಾಕ್‌ಡೌನ್ ಹೊತ್ತಲ್ಲಿ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿಯೇ ಚಿತ್ರೀಕರಿಸಲಾಗಿದೆ. ಸಿನಿಮಾ ನಿರ್ಮಾಪಕ ನಿತೀಶ್ ತಿವಾರಿ ಇದನ್ನು ನಿರ್ದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.