ADVERTISEMENT

‘ಸಿರಿಕನ್ನಡ’ದಲ್ಲಿ ಹೊಸ ಧಾರಾವಾಹಿಗಳು

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 9:08 IST
Last Updated 23 ಜೂನ್ 2020, 9:08 IST
ಅಗ್ನಿನಕ್ಷತ್ರ ಧಾರಾವಾಹಿಯ ನಟಿ ಹಿಮಜಾ
ಅಗ್ನಿನಕ್ಷತ್ರ ಧಾರಾವಾಹಿಯ ನಟಿ ಹಿಮಜಾ   

ಹದಿನೆಂಟು ತಿಂಗಳ ಹಿಂದೆ ಕನ್ನಡಿಗರಿಂದ, ಕನ್ನಡಿಗರಾಗಿ ಆರಂಭವಾದ ‘ಸಿರಿ ಕನ್ನಡ’ ವಾಹಿನಿಯು ಸೂಪರ್ ಹಿಟ್ ಚಲನಚಿತ್ರಗಳುಹಾಗೂ ವಿಭಿನ್ನ ಕಾರ್ಯಕ್ರಮಗಳ ಪ್ರಸಾರದಿಂದವೀಕ್ಷಕರಿಗೆ ಭರಪೂರ ಮನರಂಜನೆ ನೀಡಿತ್ತು. ಕಿರುತೆರೆ ವೀಕ್ಷಕರ ಮನಗೆಲ್ಲಲು ವಾಹಿನಿ ಹೊಸ ನಾಲ್ಕು ಧಾರಾವಾಹಿಗಳನ್ನು ಆರಂಭಿಸಿದೆ. ಇದೇ ಜೂನ್‌ 22ರಿಂದ ಈ ಧಾರಾವಾಹಿಗಳ ಪ್ರಸಾರ ಆರಂಭವಾಗಿದ್ದು,ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ರಿಂದ 9.30ರವರೆಗೆ ಪ್ರಸಾರವಾಗಲಿವೆ.

ರಾತ್ರಿ 7:30ಕ್ಕೆ ‘ಅಗ್ನಿನಕ್ಷತ್ರ’ ಪ್ರಸಾರವಾಗುತ್ತಿದ್ದು,ಪ್ರೀತಿಯ ವಿಭಿನ್ನ ಆಯಾಮಗಳನ್ನು ಈ ಧಾರಾವಾಹಿಯ ಕಥೆ ಪರಿಚಯಿಸಲಿದೆ.

ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ತರಂಗಿಣಿ’ ಧಾರಾವಾಹಿ ಮೂವರು ಗೆಳತಿಯರ ಜೀವನ ಸಂಘರ್ಷದ ಕಥೆಯನ್ನು ತೆರೆದಿಡಲಿದೆ.

ADVERTISEMENT

ರಾತ್ರಿ 8:30ಕ್ಕೆ ಪ್ರಸಾರವಾಗುವ ‘ಜಗದೇಕವೀರ’ ಧಾರಾವಾಹಿ ವಿಶಿಷ್ಟ ಸೋಷಿಯೋ ಫ್ಯಾಂಟಸಿ ಕಥೆ ಹೊಂದಿದೆ. ಈ ಧಾರಾವಾಹಿಯ ಶೀರ್ಷಿಕೆಗೆ ಅಡಿಬರಹವಾಗಿ‘ಜೊತೆಯಲಿ ಸುಂದರಿ’ ಇರಲಿದ್ದು, ಧಾರಾವಾಹಿಯ ಸಂಚಿಕೆಗಳು ಆಸಕ್ತಿ ಮೂಡಿಸುವಂತಿವೆ.

ರಾತ್ರಿ 9 ಗಂಟೆಗೆ ಪ್ರಸಾರವಾಗುವ ‘ಗೊಂಬೆಮನೆ‌’ ಧಾರಾವಾಹಿಯು ಅಕ್ಕ-ತಂಗಿಯ ಪ್ರೀತಿ-ವಾತ್ಸಲ್ಯದ ಕಥೆಯನ್ನು ಕೇಂದ್ರೀಕರಿಸಿದೆ. ಈಗ ಪ್ರಸಾರವಾಗುವ ಕಂತುಗಳು ಉತ್ತಮ ಕಥೆ ಮತ್ತು ಮನರಂಜನಾ ಅಂಶವನ್ನು ಹೊಂದಿವೆ. ಇವು ಖಂಡಿತ ವೀಕ್ಷಕರ ಮನಗೆಲ್ಲುವ ವಿಶ್ವಾಸವಿದೆ. ಇದಲ್ಲದೇ ಪ್ರಸಿದ್ಧವಾದ ದೇಸಿ ಕಾದಂಬರಿಗಳನ್ನು ಧಾರಾವಾಹಿಯಾಗಿ ನಿರ್ಮಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಕ್ರಿಯೇಟಿವ್ ತಂಡ ಕಾರ್ಯನಿರತವಾಗಿದೆ ಎನ್ನುತ್ತಾರೆವಾಹಿನಿಯ ಮುಖ್ಯಸ್ಥ ಸಂಜಯ್‍ಶಿಂಧೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.