ADVERTISEMENT

ಕಿರುತೆರೆಯ ನಿಕಟ ದೃಶ್ಯವೇ ಮುಳುವಾಯಿತೇ?: ನಟಿ ಚಿತ್ರಾ ಪತಿ ಹೇಮಂತ್ ಬಂಧನ

ಏಜೆನ್ಸೀಸ್
Published 15 ಡಿಸೆಂಬರ್ 2020, 12:51 IST
Last Updated 15 ಡಿಸೆಂಬರ್ 2020, 12:51 IST
 ನಟಿ ಚಿತ್ರಾ
ನಟಿ ಚಿತ್ರಾ   

ಚೆನ್ನೈ: ತಮಿಳಿನ ಕಿರುತೆರೆ ನಟಿ ಚಿತ್ರಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹೇಮಂತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗಳಿಗೆ ಸಾಯುವ ಹಾಗೆ ಹೊಡೆದಿದ್ದಾನೆ ಎಂದು ನಟಿಯ ತಾಯಿ ಆರೋಪಿಸಿದ ಒಂದು ದಿನದ ಬಳಿಕ ಬಂಧಿಸಿ ಕರೆದೊಯ್ದಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ನಟಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವುದು ಸಾಬೀತಾಗಿದ್ದು, ಹಣಕಾಸಿನ ಸಮಸ್ಯೆ ಆತ್ಮಹತ್ಯೆಗೆ ಕಾರಣ ಇರಬಹುದೆಂದು ಎಂದು ಹೇಳಲಾಗುತ್ತಿದೆ.

ಬಂಧಿತನಾಗಿರುವ ನಟಿಯ ಪತಿ ಹೇಮಂತ್, ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಎದುರಿಸುತ್ತಿದ್ಧಾನೆ.

ADVERTISEMENT

ಡಿಸೆಂಬರ್ 10ರಂದು ಚೆನ್ನೈನ ಹೊರವಲಯದ ಹೋಟೆಲೊಂದರಲ್ಲಿ ನಟಿ ಚಿತ್ರಾ ಮೃತದೇಹ ಪತ್ತೆಯಾಗಿತ್ತು.

ಕೆಲ ತಿಂಗಳ ಹಿಂದಷ್ಟೇ ಚಿತ್ರಾ ಮತ್ತು ಹೇಮಂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ, ಧಾರಾವಾಹಿಯಲ್ಲಿ ಚಿತ್ರಾ ನಿಕಟ ದೃಶ್ಯಗಳಲ್ಲಿ ನಟಿಸುತ್ತಿದ್ದ ಬಗ್ಗೆ ಹೇಮಂತ್ ಅಸಮಾಧಾನಗೊಂಡಿದ್ದರು

`ಕಿರುತೆರೆಯಲ್ಲಿ ಚಿತ್ರಾ ನಟಿಸಿದ್ದ ದೃಶ್ಯ ಹೇಮಂತ್‌ಗೆ ಇಷ್ಟವಾಗಿರಲಿಲ್ಲ. ಚಿತ್ರಾ ಸಾವಿಗೆ ಮೊದಲು ಅವರಿಬ್ಬರ ನಡುವೆ ಜಗಳ ನಡೆದಿತ್ತು. ಹೇಮಂತ್ ಆಕೆಯನ್ನು ತಳ್ಳಿದ್ದ' ಎಂದುಎಸಿಪಿ ಸುದರ್ಶನ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.