ADVERTISEMENT

ಮಹಾದೇವಿಯ ಹಿರಣ್ಮಯಿ ಕಲಾನೈಪುಣ್ಯತೆ

ರಾಘವೇಂದೆ ಕೆ.
Published 25 ಏಪ್ರಿಲ್ 2019, 12:22 IST
Last Updated 25 ಏಪ್ರಿಲ್ 2019, 12:22 IST
Tv
Tv   

ಗಗನಾ ವಿ. ಝೀ ಕನ್ನಡ ಮಹಾದೇವಿಯ ಹಿರಣ್ಮಯಿ

* ‘ಶಹನಾಯಿ’ ಅನುಭವ ಹೇಳಿ..

ವಾದ್ಯಗೋಷ್ಠಿಗಳಲ್ಲಿ ಆಗಾಗ ನೋಡಿದ್ದ ನೆನಪಿದೆ. ಅದನ್ನು ಬಿಟ್ಟರೆ ಶಹನಾಯಿ ಎಂದರೆ ಏನೆಂದೂ ಗೊತ್ತಿರಲಿಲ್ಲ. ‘ಮಹಾದೇವಿ’ಗೆ ಪ್ರೋಮೊಗೆ ನಾನು ನುಡಿಸಲೇಬೇಕಾದ ಅನಿವಾರ್ಯತೆ ಬಂತು. ಅದಕ್ಕಾಗಿ ಫೋಟೊ ಶೂಟ್‌ ಕೂಡ ಇತ್ತು. ವಾದಕ ಪರಿಣತರು ನನಗೆ ಅದನ್ನುಉಪಯೋಗಿಸುವುದನ್ನು ಹೇಳಿಕೊಟ್ಟರು. ಒಂದು ದಿನ ರಾ‌ತ್ರಿಯಿಡೀ ಅದರ ಅಭ್ಯಾಸಕ್ಕಾಗಿ ವಿನಿಯೋಗಿಸಿದ್ದೇನೆ. ಈಗ ಅದರ ಮಹತ್ವದ ಅರಿವಾಗಿದೆ. ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವ ಪ್ರಾಥಮಿಕ ತಿಳಿವಳಿಕೆ ಮೂಡಿದೆ. ನುಡಿಸುವ ಮಟ್ಟಿಗೆ ಕಲಿಯಬೇಕು ಎಂದರೆ ಮೂರು ತಿಂಗಳು ಅಭ್ಯಾಸಮಾಡಬೇಕು. ಉಸಿರಿನ ನಿಯಂತ್ರಣ ನಾದಸ್ವರವನ್ನು ಹೊರಹೊಮ್ಮಿಸುವ ಕಲೆ ನಿಜಕ್ಕೂ ಅದ್ಭುತ. ಅದೆಲ್ಲವನ್ನು ತಿಳಿದುಕೊಳ್ಳಲು ಈ ಪಾತ್ರ ಸಹಾಯ ಮಾಡಿದೆ ಎನ್ನುವುದು ಮಾತ್ರ ಅವಿಸ್ಮರಣೀಯ.

ADVERTISEMENT

ನಿಮ್ಮ ಹಿನ್ನೆಲೆಯನ್ನು ಹೇಳಬಹುದಾ?

ಮೂಲತಃ ನಾನು ಡಾನ್ಸರ್‌. ರಿಯಾಲಿಟಿ ಷೋಗಳ ಮೂಲಕ ನಾನು ಬಣ್ಣದ ಲೋಕಕ್ಕೆ‍ಪ್ರವೇಶಿಸಲು ಸಾಧ್ಯವಾಯಿತು. ‘ಕುಣಿಯೋಣು ಬಾರಾ’ ‘ರಿದಮ್‌ ತದಮ್‌’ ಎರಡೂ ಡಾನ್ಸ್‌ ಕಾರ್ಯಕ್ರಮ ಅದಾದ ಮೇಲೆ ಉದಯದ ಚಿಂಟೂ ಮಕ್ಕಳ ವಾಹಿನಿಯಲ್ಲಿ ಆರೇಳು ವರ್ಷ ನಿರೂಪಕಿಯಾಗಿ ಕೆಲಸ ಮಾಡಿದೆ. ಅದಾದ ಮೇಲೆ ಸಿನಿಮಾಗಳಲ್ಲಿ ನಟಿಸಿದೆ. ‘ದೊಡ್ಮನೆ ಸೊಸೆ’ ಧಾರಾವಾಹಿಯಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುವ ಮೂಲಕ ಕಿರುತೆರೆಗೆ ಪರಿಚಯವಾದೆ. ಈಗ ಹಿರಣ್ಮಯಿ ಪಾತ್ರದ ಜೊತೆಗೆ ತಮಿಳಿನ ಜಯಾ ಟೀವಿಯಲ್ಲೂ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದೇನೆ.

* ವೈವಿಧ್ಯ ಅನುಭಗಳು ಕಷ್ಟ ಅನ್ನಿಸಲಿಲ್ಲವೇ?

ಎಲ್ಲಾ ಅನುಭವಗಳು ಇದ್ದಾಗಲೇ ಕಲಾವಿದರಾಗಿ ಪರಿಪೂರ್ಣ ಆಗಲು ಸಾಧ್ಯ. ಇಂತಹದ್ದು ಗೊತ್ತಿಲ್ಲ ಅನ್ನುವ ಹಾಗೆ ಇರಬಾರದು. ಎಂತಹದ್ದೇ ಪಾತ್ರವನ್ನು ನಿರ್ವಹಿಸಬೇಕು ಎನ್ನವ ಸಂದರ್ಭದಲ್ಲಿ ನಾನಾ ಕ್ಷೇತ್ರಗಳ ಅನುಭವವೇ ನೆರವಿಗೆ ಬರುವುದು. ಏನೇ ಆಗಿದ್ದರು ನಟನೆ ನನ್ನ ಜೀವ ಎಂದು ಭಾವಿಸಿದ್ದೇನೆ. ಈಗ ಡಾನ್ಸ್‌ ಮಾಡುವ ಸವಾಲು ಬಂದರೆ ಖಂಡಿತ ಡಾನ್ಸ್‌ ಮಾಡುತ್ತೇನೆ.ಬೇಕೆಂದರೆ ನಿರೂಪಣೆ ಮಾಡುತ್ತೇನೆ. ಬದುಕಿನಲ್ಲಿ ಎಂತಹ ಸವಾಲುಗಳೇ ಎದುರಾದರೂ ಅದನ್ನು ನಿಭಾಯಿಸುವುದು ಕಲೆ. ಅದೇ ಕಲೆ ನಮ್ಮ ವೃತ್ತಿಗೂ ಕಳೆಯಾಗಿ ಕಂಗೋಳಿಸುತ್ತದೆ.

* ನಿಮ್ಮ ಹೊಸ ಹುಡುಕಾಟದ ಬಗ್ಗೆ ಹೇಳಿ?

ನಟಿಯಾಗಿ ಬೆಳೆಯುವುದು ಒಂದೇ ನನಗೆ ಇರುವ ಗುರಿ. ಪಾತ್ರದ ಆಯ್ಕೆ ವಿಷಯಕ್ಕೆ ಬಂದರೆ ಅದರ ಮಹತ್ವ ನನಗೆ ಮುಖ್ಯವಾಗುತ್ತದೆ. ಅಂದರೆ ಕತೆಯ ನಿರೂಪಣೆಯಲ್ಲಿ ಅದರ ಪ್ರಾಧಾನ್ಯತೆಯನ್ನು ಅದು ಉಳಿಸಿಕೊಂಡಿರಬೇಕು. ಕತೆಯ ಮೂಲಕ ಪಾತ್ರದ ಮಹತ್ವವನ್ನು ನೋಡುತ್ತಾನೆ. ಅದು ಬಿಟ್ಟರೆ ಹೊಸ ಸವಾಲುಗಳನ್ನು ಎದುರು ನೋಡುವ ಮನಸ್ಥಿತಿ ಸದ್ಯಕ್ಕಂತೂ ಇಲ್ಲ. ಮೊದಲಿನಿಂದಲೂ ಸಣ್ಣ ಆಸೆಯೊಂದಿದೆ. ನಾನು ಡಾನ್ಸ್‌ ಮೂಲಕವೇ ತೆರೆಗೆ ಬಂದಿದ್ದೇನೆ. ಅದನ್ನು ಮರೆಯಲು ಸಾಧ್ಯವಿಲ್ಲ. ಬಾಲ್ಯದಿಂದಲೂ ಡಾನ್ಸ್‌ ಶಾಲೆ ತೆರೆಯಬೇಕು ಅಂದುಕೊಂಡಿದ್ದೇನೆ. ಅದಕ್ಕೆ ಕಾಲ– ಅವಕಾಶ ಎರಡೂ ಕೂಡಬೇಕು.

ಹಿರಣ್ಮಿಯಿ ಪಾತ್ರ ಹೇಗಿದೆ?

ತುಂಬಾ ಸಾಧು ಸ್ವಭಾವದ ಹೆಣ್ಣು. ಮುಕಾಂಬಿಕೆಯ ಭಕ್ತೆ. ಅವಳಿಗೆ ಯಾವ ತಪ್ಪನ್ನೂ ಮಾಡುವ ಉದ್ದೇಶ ಇಲ್ಲ. ಅಷ್ಟು ಮಾತ್ರವಲ್ಲ ಬೇರೆಯವರು ಯಾರಾದರೂ ತಪ್ಪು ಮಾಡಿದರೆ ಅದನ್ನು ಸರಿಪಡಿಸಲಯ ಯತ್ನಿಸುತ್ತಾಳೆ. ಅದೇ ಅವಳಿಗೆ ಕೆಲವೊಮ್ಮೆ ಎಡವಟ್ಟು ಮಾಡುವ ಸಂದರ್ಭವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.