ADVERTISEMENT

ಬಿಗ್‌ಬಾಸ್‌ ಖ್ಯಾತಿಯ ಉರ್ಫಿ ಜಾವೇದ್‌ ಟ್ರೋಲ್‌ ಆಗಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 8:59 IST
Last Updated 25 ನವೆಂಬರ್ 2021, 8:59 IST
ಉರ್ಫಿ ಜಾವೇದ್‌
ಉರ್ಫಿ ಜಾವೇದ್‌   

ಮುಂಬೈ:ಬಿಗ್‌ಬಾಸ್‌ ಖ್ಯಾತಿಯ ಉರ್ಫಿ ಜಾವೇದ್‌ ಪ್ಯಾಶನ್‌ಗೆ ಹೆಚ್ಚು ಒತ್ತು ಕೊಡುತ್ತಾರೆ. ಹಾಲಿವುಡ್‌ ಬೆಡಗಿಯರ ಉಡುಪು ಅನುಕರಿಸಿ ಟ್ರೋಲ್ ಆಗುವುದು ಅವರಿಗೆ ಹೊಸದಲ್ಲ!

ಈ ಸಲ ಅವರು ಬೆಲ್ಲಿ ಹ್ಯಾಡಿಡ್‌ ಅವರ ಮಾದರಿಯಲ್ಲಿ ಉಡುಪು ಧರಿಸಿ ಟ್ರೋಲ್‌ ಆಗಿದ್ದಾರೆ. ಈ ಹಿಂದೆ ಹಲವು ಸಲ ಕೂಡ ಅವರು ಟ್ರೋಲ್ ಆಗಿದ್ದರು.

ಕಪ್ಪು ಬಣ್ಣದ ಪಾರದರ್ಶಕವಾಗಿರುವ ಆ ಬಟ್ಟೆ ಉರ್ಫಿ ಅವರಿಗೆ ಚೆನ್ನಾಗಿ ಕಾಣುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಜೀವನ ಪೂರ್ತಿ ಅನುಕರಿಸುವುದೇ ಆಯಿತು ಎಂದು ಟ್ರೋಲ್‌ ಮಾಡಿದ್ದಾರೆ.

ADVERTISEMENT

ಒಟ್ಟಿನಲ್ಲಿ ಉರ್ಫಿ ಅವರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.