

ಪಲ್ಲವಿ ಮತ್ತಿಘಟ್ಟ ಅವರು ಯಕ್ಷಗಾನ ಕಲಾವಿದೆಯಾಗಿದ್ದು, ಕಿರುತೆರೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ನಟಿ ಅಂಜಲಿ ಅವರೊಂದಿಗೆ ಪಲ್ಲವಿ ಮತ್ತಿಘಟ್ಟ
ಕನ್ನಡದಲ್ಲಿ ಆಕಾಶದೀಪ, ಮಹಾದೇವಿ, ನೇತ್ರಾವತಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ಸ್ಟಾರ್ ನಟರ ಜೊತೆಯೂ ಪಲ್ಲವಿ ನಟಿಸಿದ್ದಾರೆ.
ಉಪೇಂದ್ರ ಅವರ ಸೂಪರ್ ರಂಗ, ರವಿಚಂದ್ರನ್ ಅವರ ಪರಮಶಿವ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಪಲ್ಲವಿ ಅವರು ಹಿರಿಯ ಯಕ್ಷಗಾನ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ಅವರೊಂದಿಗೂ ಪಾತ್ರವನ್ನು ನಿರ್ವಹಿಸಿದ್ದಾರೆ.