ADVERTISEMENT

ಹೈದರಾಬಾದ್‌: 125 ವರ್ಷದ ದೈತ್ಯ ಆಮೆ ಸಾವು

ಪಿಟಿಐ
Published 16 ಮಾರ್ಚ್ 2024, 16:15 IST
Last Updated 16 ಮಾರ್ಚ್ 2024, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ವಯೋಸಹಜ ಅನಾರೋಗ್ಯದಿಂದ ಸುಮಾರು 125 ವಯಸ್ಸಿನ ಗ್ಯಾಲಪಗೋಸ್ ದೈತ್ಯ ಆಮೆಯು ಇಲ್ಲಿನ ನೆಹರೂ ಜೈವಿಕ ಉದ್ಯಾನದಲ್ಲಿ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

95 ವರ್ಷದ ಆಮೆಯೊಂದಿಗೆ ಜೈವಿಕ ಉದ್ಯಾನದ ಪ್ರಮುಖ ಆಕರ್ಷಣೆ ಹಾಗೂ ಹಿರಿಯ ಜೀವಿಯಾಗಿದ್ದ ಈ ಆಮೆಯು ಹತ್ತು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಮೃಗಾಲಯದ ಪಶುವೈದ್ಯಕೀಯ ತಂಡವು ಚಿಕಿತ್ಸೆ ನೀಡುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.

ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಹೆಚ್ಚಿನ ತನಿಖೆಗಾಗಿ ಮಾದರಿಗಳನ್ನು ರಾಜೇಂದ್ರನಗರದ ವಿಬಿಆರ್‌ಐ ಮತ್ತು ಪಶುವೈದ್ಯಕೀಯ ಕಾಲೇಜಿಗೆ ಕಳಿಸಲಾಗಿದೆ ಎಂದಿದೆ.

ADVERTISEMENT

ನಗರದ ಸಾರ್ವಜನಿಕ ಉದ್ಯಾನದಿಂದ (ಬಾಗ್‌–ಎ–ಆಮ್‌) ಈ ಆಮೆಯನ್ನು 1963ರಲ್ಲಿ ಸ್ಥಳಾಂತರಿಸಲಾಗಿತ್ತು. ನಂತರ ನೆಹರೂ ಜೈವಿಕ ಉದ್ಯಾನದಲ್ಲಿ ನೆಲೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.