ADVERTISEMENT

ಅಮೆರಿಕನ್‌ ಮುಂಗುಸಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 19:45 IST
Last Updated 17 ನವೆಂಬರ್ 2019, 19:45 IST
ಅಮೆರಿಕನ್‌ ಮುಂಗುಸಿ
ಅಮೆರಿಕನ್‌ ಮುಂಗುಸಿ   

ಮುಂಗುಸಿಗಳಲ್ಲಿಯೇ ಅಮೆರಿಕನ್‌ ಮುಂಗುಸಿಯು ವಿಶಿಷ್ಟವಾಗಿದ್ದು, ಇದರ ವೈಜ್ಞಾನಿಕ ಹೆಸರು ಟ್ಯಾಕ್ಸ್ಡಿ ಟಕ್ಸಸ್‌ (Taxidea taxus). ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಹೇಗಿರುತ್ತೆ?

ಅಮೆರಿಕನ್‌ ಮುಂಗುಸಿಯು ಗಾತ್ರದಲ್ಲಿ ಚಿಕ್ಕದಾಗಿದ್ದು, ಉರುಟಾದ ತಲೆಯನ್ನು ಹೊಂದಿರುತ್ತದೆ. ಮೈ ತುಂಬ ತುಪ್ಪಳವಿದ್ದು, ಕಿವಿಯು ಚಿಕ್ಕದಿರುತ್ತದೆ. ಬಾಲವು ದಟ್ಟ ತುಪ್ಪಳದಿಂದ ಕೂಡಿರುತ್ತದೆ. ಮೈ ಬಣ್ಣ ಕಪ್ಪು, ಬಿಳಿ, ಕೆಂಪು ಮಿಶ್ರಿತವಾಗಿರುತ್ತದೆ. ಹಣೆಯಿಂದ ಮುಖದವರೆಗೆ ಮೂರು ಬಿಳಿಯ ಗೆರೆಗಳಿರುತ್ತದೆ.

ADVERTISEMENT

ಎಲ್ಲಿರುತ್ತೆ?

ಅಮೆರಿಕನ್‌ ಮುಂಗುಸಿಯು ಮೆಕ್ಸಿಕೊ ಉತ್ತರ ಭಾಗ ಹಾಗೂ ಅಮೆರಿಕದ ಜೌಗು ಪ್ರದೇಶಗಳಲ್ಲಿ ನೋಡಬಹುದು. ಕೆನಡಾದ ದಕ್ಷಿಣ ಭಾಗದಲ್ಲಿಯೂ ಇದು ವಾಸ ಮಾಡುತ್ತದೆ.

ಆಹಾರ ಪದ್ಧತಿ

ಇದು ಮಾಂಸಾಹಾರಿಯಾಗಿದ್ದು, ಪುಟ್ಟ ಪಕ್ಷಿಗಳನ್ನು ಬೇಟೆಯಾಡಿ ತಿನ್ನುತ್ತದೆ. ಮರದ ಎಳೆ ರೆಂಬೆ, ಹುಳುಗಳು, ಅಳಿಲು, ಹೆಗ್ಗಣ, ಇಲಿಗಳು, ಹುಳು ಹುಪ್ಪಟೆಗಳು ಇದರ ಆಹಾರದ ಭಾಗ.

ವರ್ತನೆ ಮತ್ತು ಜೀವನಕ್ರಮ

ಏಕಾಂತವನ್ನು ಬಯಸುವ ಪಕ್ಷಿ. ರಾತ್ರಿಯ ಹೊತ್ತು ಸದಾ ಚಟುವಟಿಕೆಯಿಂದ ಇರುತ್ತದೆ. ಮನುಷ್ಯರಿಂದಲೂ ಸದಾ ಇರಲು ಇಷ್ಟಪಡುತ್ತದೆ. ಬೆಳಿಗ್ಗೆಯೆಲ್ಲ ಆಹಾರವನ್ನು ಅರಸಿಕೊಂಡು ಹೋಗುತ್ತದೆ. ತನ್ನ ಮುಂಗಾಲಿನ ಉಗುರನ್ನು ಬಳಸಿ ಮಣ್ಣಿನಲ್ಲಿರುವ ಹುಳುಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ನೆಲದ ಮೇಲೆ ಸಣ್ಣ ಸಣ್ಣ ಬಿಲಗಳನ್ನು ಮಾಡಿಕೊಳ್ಳುತ್ತದೆ. ಚಳಿಗಾಲದಲ್ಲಿ ಬೆಚ್ಚನೆಯ ಬಿಲದಲ್ಲಿ ಇರಲು ಇಷ್ಟಪಡುತ್ತದೆ. ಸಂರಕ್ಷಣೆಯ ದೃಷ್ಟಿಯಿಂದಲೂ ಬಿಲದಲ್ಲಿ ಇರುತ್ತದೆ. ಮೂರರಿಂದ 10 ಮೀಟರ್‌ ವ್ಯಾಪ್ತಿಯಲ್ಲಿ ಬಿಲ ತೋಡುತ್ತದೆ. ಮಲಗಲು ಒಂದು ಕೋಣೆಯನ್ನು ಮಾಡಿಕೊಳ್ಳುತ್ತದೆ. ಇದು ವಾಸಿಸುವ ಪ್ರದೇಶದಲ್ಲಿ ಹಲವು ಬಿಲಗಳನ್ನು ತೋಡಿಡುತ್ತದೆ. ಸಮಯ, ಸಂದರ್ಭಕ್ಕೆ ಅನುಸಾರವಾಗಿ ಆ ಬಿಲದಲ್ಲಿ ಇರಲು ಇಷ್ಟಪಡುತ್ತದೆ.

ಸಂತಾನೋತ್ಪತ್ತಿ

ಇದು ತನ್ನ ಜೀವಿತಾವಧಿಯಲ್ಲಿ ಹಲವು ಸಂಗಾತಿಗಳನ್ನು ಹೊಂದುತ್ತದೆ. ಸಾಮಾನ್ಯವಾಗಿ ಸಂಗಾತಿಯನ್ನು ಅರಸಿ, ಬಿಲ ಬಿಡುತ್ತದೆ. ಆಗಸ್ಟ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. 1.5 ತಿಂಗಳು ಕಾಲ ಗರ್ಭಾವಸ್ಥೆಯಲ್ಲಿರುತ್ತದೆ. ಸಾಮಾನ್ಯವಾಗಿ 1ರಿಂದ 5 ಮರಿಗಳನ್ನು ಹಾಕುತ್ತದೆ. 6 ವಾರಗಳವರೆಗೆ ಈ ಮರಿಗಳಿಗೆ ಕಣ್ಣು ಕಾಣುವುದಿಲ್ಲ. ಆ ನಂತರವೂ ತಾಯಿ ಮುಂಗುಸಿಯೇ ಪೋಷಣೆ ಮಾಡುತ್ತದೆ. ಗಂಡು ಮರಿಯು 1 ವರ್ಷಕ್ಕೆ ಪ್ರಾಯಕ್ಕೆ ಬಂದರೆ, ಹೆಣ್ಣುಮರಿಯು 4 ತಿಂಗಳಿಗೆಲ್ಲ ಷೋಡಾವಸ್ಥೆಯನ್ನು ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಮುಂಗುಸಿಗಳು ಕೋಳಿ ಮತ್ತು ಅದರ ಮೊಟ್ಟೆ, ಮೊಲ, ಸಣ್ಣಪುಟ್ಟ ಸರೀಸೃಪಗಳನ್ನು ಬೇಟೆಯಾಡುತ್ತದೆ.

* ಇದನ್ನು ಧೈರ್ಯವಂತ ಪ್ರಾಣಿಯೆಂದೇ ಪರಿಗಣಿಸಲಾಗಿದ್ದು, ಅಪಾಯದ ಸಂದರ್ಭದಲ್ಲಿಯೂ ಹೆದರಿಕೊಳ್ಳದೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.

* ಇದರ ಶ್ರವಣ ಮತ್ತು ಆಘ್ರಾಣ ಶಕ್ತಿ ಅಸಾಧ್ಯವಾಗಿದ್ದು, ದೃಷ್ಟಿ ಅಸ್ಪಷ್ಟವಾಗಿರುತ್ತದೆ.

ಜೀವಿತಾವಧಿ-9 ರಿಂದ 15 ವರ್ಷ,ತೂಕ-7 ರಿಂದ 9 ಕೆ.ಜಿ,ಉದ್ದ-60ರಿಂದ 75 ಸೆಂ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.