ADVERTISEMENT

ಹುಲಿ ಸಂರಕ್ಷಣೆಗೆ ‘ಕಾಡು’

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 2:58 IST
Last Updated 29 ಜುಲೈ 2019, 2:58 IST
   

ಜುಲೈ 29ರಂದು ಆಚರಿಸಲಾಗುತ್ತಿರುವ ಅಂತರರಾಷ್ಟ್ರೀಯ ಹುಲಿಗಳ ದಿನಾಚರಣೆಯ ಭಾಗವಾಗಿ ದೇಸಿ ವೈನ್ ಬ್ರಾಂಡ್ ‘ಕಾಡು’ ಹುಲಿ ಸಂರಕ್ಷಣೆಗೆ ದೇಣಿಗೆ ಪ್ರಕಟಿಸಿದೆ.

2014ರಲ್ಲಿ ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ(ಎನ್‌ಟಿಸಿಎ) ಪ್ರಕಟಿಸಿದ ವರದಿಯ ಪ್ರಕಾರ, ವಿಶ್ವದಲ್ಲಿ 3890 ಹುಲಿಗಳು ಉಳಿದಿವೆ. ಅವುಗಳ ಸಂತತಿ ಅಳಿವಿನ ಅಂಚಿನಲ್ಲಿವೆ. ಭಾರತದಲ್ಲಿ 2226 ಹುಲಿಗಳಿದ್ದು ಕರ್ನಾಟಕದ ಹುಲಿ ಅಭಯಾರಣ್ಯಗಳು 406 ಹುಲಿಗಳಿಗೆ ಆಶ್ರಯ ನೀಡಿವೆ.

‘ಕಾಡು’, ಹುಲಿ ಸಂರಕ್ಷಣೆ ಉದ್ದೇಶಕ್ಕಾಗಿಯೇ ತಯಾರಿಸಿದ ಭಾರತದ ಮೊದಲ ವೈನ್. ಮಾರಾಟವಾದ ಪ್ರತಿ ಬಾಟಲಿಗೂ ದೇಣಿಗೆ ಹೊಂದಿರುತ್ತದೆ. ಹಲವು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ಕರ್ನಾಟಕದ ಎರಡನೇಯ ವೈನರಿ ‘ಸುಲಾ’ ವಿನೆಯಾರ್ಡ್‌ನಲ್ಲಿ ಈ ವೈನ್‌ಅನ್ನು ವಿಶೇಷವಾಗಿ ಉತ್ಪಾದಿಸಲಾಗುತ್ತದೆ.

ADVERTISEMENT

ವೈನ್‌ಮೇಕರ್ ಗೋರಖ್ ಗಾಯಕ್‌ವಾಡ್ ‘ಕಾಡು’ ವೈನ್‌ ರೂಪಿಸಿದ್ದಾರೆ. ಪ್ರತಿ ಮಾರಾಟ ವಾದ ‘ಕಾಡು’ ಬಾಟಲಿಯ ಸಣ್ಣ ಮೊತ್ತವನ್ನು ‘ಸುಲಾ’ ವಿನೆಯಾರ್ಡ್ಸ್ ಹುಲಿಗಳ ಸಂರಕ್ಷಣೆಗೆ ನೀಡುತ್ತದೆ. ಇದಕ್ಕಾಗಿ ‘ಸುಲಾ’ ವಿನೆಯಾರ್ಡ್ಸ್, ಸ್ಯಾಂಕ್ಚುಯರಿ ನೇಚರ್ ಫೌಂಡೇಷನ್‌ನ ಮಡ್ ಆನ್ ಬೂಟ್ಸ್ ಸಂಸ್ಥೆಯೊಂದಿಗೆ ಸಹಯೋಗ ಪ್ರಕಟಿಸಿದೆ.

‘ಭಾರತದ ವೈನ್‌ನಲ್ಲಿ ಮುಂಚೂಣಿಯಲ್ಲಿದ್ದು ನಾವು ಹುಲಿಗಳ ಸಂರಕ್ಷಣೆಗೆ ಮಹತ್ತರ ಕಾರ್ಯ ನಿರ್ವಹಿಸಲು ಅತ್ಯುತ್ತಮವಾದ ವೈನ್‌ಗಳನ್ನು ಸೃಷ್ಟಿಸುವ ಮೂಲಕ ಕೊಡುಗೆ ನೀಡಲು ಬಯಸಿದ್ದೇವೆ’ ಎನ್ನುತ್ತಾರೆ ‘ಸುಲಾ’ ವಿನೆಯಾರ್ಡ್ಸ್ ಸಂಸ್ಥಾಪಕ ಮತ್ತು ಸಿಇಒ ರಾಜೀವ್ ಸಾಮಂತ್.

ಕಾಡು ವೈನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.