ನಾನು 1964ರಲ್ಲಿ ಉದಯಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೆ. ಅಲ್ಲಿ ಶಾಟ್‌ಪಟ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ನಂತರ ವಾಲಿಬಾಲ್ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬೆಂಗಳೂರು ವಿಶ್ವವಿದ್ಯಾಲಯ ತಂಡದ ನಾಯಕಿಯೂ ಆಗಿದ್ದೆ. ಕರ್ನಾಟಕ ರಾಜ್ಯ ತಂಡವನ್ನೂ ಕೆಲವು ರಾಷ್ಟ್ರೀಯ ಕೂಟಗಳಲ್ಲಿ ಮುನ್ನಡೆಸಿದ್ದೆ. ದೆಹಲಿ, ಗುಜರಾತ್, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಡೆದಿದ್ದ ರಾಷ್ಟ್ರೀಯ ಕೂಟಗಳಲ್ಲಿ ಕರ್ನಾಟಕದ ಘನತೆಯನ್ನು ಎತ್ತಿ ಹಿಡಿದಿದ್ದೆ.
1974ರಲ್ಲಿ ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತ ಅಂತರ ವಾರ್ಸಿಟಿ ವಾಲಿಬಾಲ್ ಟೂರ್ನಿಯಲ್ಲಿ ನಾನು ಪಾಲ್ಗೊಂಡು ವಾಪಸಾದ ನಂತರ ಇಲ್ಲಿ ಸಂಬಂಧ ಪಟ್ಟವರು ನನಗೆ ಕೊಟ್ಟಿದ್ದ ಕೋಟನ್ನು ವಾಪಸು ಪಡೆದು ಕೊಂಡರು. ಅಂದು ನನಗೆ ಬಹಳ ನೋವಾಗಿತ್ತು.
1978ರಲ್ಲಿ ನಾನು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗ ವಾರ್ಸಿಟಿ ಕೋಟನ್ನು ವಾಪಸು ಪಡೆಯುವುದರ ಬಗ್ಗೆ ಧ್ವನಿ ಎತ್ತಿದ್ದೆ.
ಕ್ರೀಡಾಪಟುಗಳಿಗೆ ನೀಡುವ ದಿನಭತ್ಯೆ ಹೆಚ್ಚಿಸಬೇಕೆಂಬ ಅಂಶವೇ ನಾನು ಸದನದಲ್ಲಿ ಮೊದಲ ಬಾರಿಗೆ ಮಾತನಾಡಿದ ವಿಷಯಗಳು
ಕ್ರೀಡೆಗೆ ಸಂಬಂಧಿಸಿದಂತೆ ಸರ್ಕಾರದ ಧೋರಣೆಯಲ್ಲಿ ದೊಡ್ಡ ಬದಲಾವಣೆಯಂತೂ ಆಗಿಲ್ಲ ಬಿಡಿ. ಅಂತಹದ್ದೊಂದು ಮಹತ್ವದ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಅದೇ ರೀತಿ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.