ADVERTISEMENT

ಕ್ರೀಡಾ ಸಂವಾದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಡಾನ್ ಬ್ರಾಡ್ಮನ್ ಹೊಗಳಿದ ಮೇಲೆ ಇನ್ನೇನು?
ಸಚಿನ್‌ಗಿಂತ ಲಾರಾ ಶ್ರೇಷ್ಠ ಎಂಬುದು ಪಾಂಟಿಂಗ್ ಅನಿಸಿಕೆ. ಸಚಿನ್‌ಗಿಂತ ತಾನು ಶ್ರೇಷ್ಠನಲ್ಲ ಎನ್ನುವ ಕೀಳರಿಮೆ ಪಾಂಟಿಂಗ್ ಅವರನ್ನು ಕಾಡಿರುವಾಗ ಅವರು ಇನ್ನೇನು ಯೋಚಿಸಲು ಸಾಧ್ಯ ಹೇಳಿ. ಸುದ್ದಿಯ ಬಲೂನ್‌ಗೆ ಚುಚ್ಚಬೇಕಲ್ಲ, ಚುಚ್ಚಿದ್ದಾರಷ್ಟೆ.

ಆಸ್ಟ್ರೇಲಿಯಾದ ಸರ್ ಬ್ರಾಡ್ಮನ್‌ಗಿಂತ ಸರ್ವಶ್ರೇಷ್ಠರು ಯಾರಿದ್ದಾರೆ ಹೇಳಿ. ಅಂತಹವರೇ ಸಚಿನ್ ಅವರನ್ನು ಬಾಯಿ ತುಂಬಾ ಹೊಗಳಿರುವಾಗ ಪಾಂಟಿಂಗ್ ಅವರಂತಹವರು ಏನೇ ಹೇಳಿದರೂ ಸಚಿನ್ ಗಂಭೀರವಾಗಿ ಪರಿಗಣಿಸಬೇಕಿಲ್ಲ.
-ಎಚ್.ಆನಂದ ಕುಮಾರ್ ಚಿತ್ರದುರ್ಗ

ಪಾಂಟಿಂಗ್ ಹೇಳಿಕೆ ಅರ್ಥಹೀನ
ಸಚಿನ್ ತೆಂಡೂಲ್ಕರ್ `ಕ್ರಿಕೆಟ್ ದೇವರು' ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವತ್ತಿನ `ಹೊಡಿ ಬಡಿ' ಆಟದಲ್ಲಿ ಸಚಿನ್ ಅವರು ಮಂಕಾಗಿದ್ದಾರೆ. ಏಕೆಂದರೆ ಅವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಸಚಿನ್ 100ನೇ ಶತಕ ಗಳಿಸಿದಾಗ ಕ್ರಿಕೆಟ್ ಜಗತ್ತೇ ಸಂಭ್ರಮಿಸಿತ್ತು. ಆದರೆ ಭಾರತ ಮಾತ್ರ ಆ ಪಂದ್ಯದಲ್ಲಿ ಸೋತಿತ್ತು. ಏಕೆಂದರೆ ಅಂದು ಭಾರತದ ಬೌಲರ್‌ಗಳು ತೀರಾ ಕಳಪೆಯಾಗಿ ಆಡಿದ್ದರು. ಸಚಿನ್ ಆಟ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿಲ್ಲ ಎಂದು ಪಾಂಟಿಂಗ್ ಹೇಳುತ್ತಾ ಲಾರಾ ಅವರನ್ನು ಹೊಗಳಿರುವುದು ತೀರಾ ಅರ್ಥಹೀನ ಎನಿಸುತ್ತದೆ.
-ಮಂಜುನಾಥ ರಾಮಾಪುರೆ, ಬಸ್ನಾಪುರ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ

ನಿಮ್ಮ ಅನಿಸಿಕೆಯನ್ನು ಈ ವಿಳಾಸಕ್ಕೆ ಬರೆಯಿರಿ

ಸಂಪಾದಕರು, ಕ್ರೀಡಾ ಸಂವಾದ,ನಂ: 75, ಎಂ.ಜಿ. ರಸ್ತೆ, ಬೆಂಗಳೂರು 560001
email: kreede@ prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.