ADVERTISEMENT

Army Day | ಅತಿ ಹೆಚ್ಚು ಸೇನಾ ಸುಂದರಿಯರನ್ನು ಹೊಂದಿರುವ ದೇಶಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 1:25 IST
Last Updated 15 ಜನವರಿ 2026, 1:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೆಣ್ಣುಮಕ್ಕಳು ಈಗ ಬಾಹ್ಯಾಕಾಶ ಯಾನದಿಂದ ಹಿಡಿದು ಯುದ್ಧಭೂಮಿಯಲ್ಲಿ ಧೈರ್ಯವಾಗಿ ನಿಲ್ಲುವವರೆಗೂ ಗುರುತಿಸಿಕೊಂಡಿದ್ದಾರೆ. ಸೇನೆಯಲ್ಲೂ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ಸೇರಿ ಜಗತ್ತಿನ ಹಲವು ದೇಶಗಳ ಸೇನೆಯಲ್ಲಿ ಮಹಿಳಾ ಸೈನಿಕರು ತಮ್ಮ ಸೌಂದರ್ಯ ಮತ್ತು ಶೌರ್ಯ ಎರಡಕ್ಕೂ ಹೆಸರಾಗಿದ್ದಾರೆ. ಯಾವೆಲ್ಲ ದೇಶದ ಸೇನೆಯಲ್ಲಿ ಮಹಿಳಾ ಸೈನಿಕರು ಸೌಂದರ್ಯದ ಜತೆಗೆ ದೇಶಸೇವೆಗೂ ಸಿದ್ಧವಾಗಿರುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ADVERTISEMENT

ಭಾರತ

ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣಾ ರೇಖೆ ಬಳಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ ಮಹಿಳಾ ಸಿಬ್ಬಂದಿ

ಭಾರತದ ಸೇನೆಯಲ್ಲಿ ಮಹಿಳಾ ಸೈನಿಕರು ಅಥವಾ ಅಧಿಕಾರಿಗಳು ತಮ್ಮ ಧೈರ್ಯದಿಂದ ಮಾತ್ರವಲ್ಲ, ಸೌಂದರ್ಯದಿಂದಲೂ ಗುರುತಿಸಿಕೊಂಡಿದ್ದಾರೆ. 2025ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ಆಪರೇಷನ್ ಸಿಂಧೂರ ವೇಳೆ ಮುಂದಾಳತ್ವ ವಹಿಸಿದ್ದು ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್. ಇವರಲ್ಲದೆ, ಭಾರತೀಯ ಸೇನೆಯಲ್ಲಿ ಅನೇಕರು ಮರೆಯಲಾರದ ಸಾಧನೆ ಮಾಡಿದ್ದಾರೆ. ಅವರಲ್ಲಿ ಸಿಯಾಚಿನ್ ನೀರ್ಗಲ್ಲಿರುವ ಪ್ರದೇಶದಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್, ಭಾರತೀಯ ಸೇನೆಯ ಮೊದಲ ಮಹಿಳಾ ಸ್ಕೈಡೈವರ್ ಆಗಿ ನೇಮಕಗೊಂಡಿದ್ದ ಲಾನ್ಸ್‌ ನಾಯಕ್‌ ಮಂಜು ಕೂಡ ಪ್ರಮುಖರು. 

ಇಸ್ರೇಲ್‌

ಇಸ್ರೇಲ್‌ ಸೇನೆ

ಇಸ್ರೇಲ್‌ನಲ್ಲಿ ಮಹಿಳೆಯರಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದೆ. 18 ರಿಂದ 23 ವರ್ಷದ ಮಹಿಳೆಯರು 2 ವರ್ಷ 4 ತಿಂಗಳುಗಳ ಕಾಲ ಸಕ್ರಿಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇಸ್ರೇಲಿ ರಕ್ಷಣಾ ಪಡೆಯ (ಐಡಿಎಫ್‌) ಮಹಿಳಾ ಸೈನಿಕರು ಜಗತ್ತಿನಲ್ಲೇ ಸುಂದರಿಯರು ಮತ್ತು ಶಕ್ತಿಶಾಲಿಗಳು ಎಂದೇ ಹೇಳಲಾಗುತ್ತದೆ. ಪ್ರತಿ ವರ್ಷ 1,500 ಮಹಿಳಾ ಸೈನಿಕರನ್ನು ತನ್ನ ರಕ್ಷಣಾ ಪಡೆಗಳಿಗೆ ಇಸ್ರೇಲ್‌ ನೇಮಿಸಿಕೊಳ್ಳುತ್ತಿದೆ

ರಷ್ಯಾ

ರಷ್ಯಾದ ಮಹಿಳಾ ಸೈನಿಕರು

ರಷ್ಯಾದ ಸೇನೆಯಲ್ಲಿರುವ ಮಹಿಳೆಯರು ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ಮಿಲಿಟರಿ ಪರೇಡ್‌ಗಳಲ್ಲಿನ ಶಿಸ್ತಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಸುಮಾರು 37,500 ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎನ್ನುತ್ತವೆ ವರದಿಗಳು. ಉಕ್ರೇನ್ ವಿರುದ್ಧ ಯುದ್ಧದಲ್ಲಿ ಸುಮಾರು 1,100 ಮಹಿಳೆಯರು ನೇರವಾಗಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ರೊಮೇನಿಯಾ

ರೊಮೇನಿಯಾ ಸೇನೆಯಲ್ಲಿ ಮಹಿಳೆಯರು

ಅಂತರರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ, ರೊಮೇನಿಯಾದ ಮಹಿಳಾ ಸೈನಿಕರು ವಿಶ್ವದ ಅತ್ಯಂತ ಸುಂದರ ಸೈನಿಕರ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. 2024ರ ಅಂತ್ಯದ ವೇಳೆಗೆ ರೊಮೇನಿಯಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ (MoND) ಒಟ್ಟು ಸಿಬ್ಬಂದಿಯಲ್ಲಿ ಶೇ 23ರಷ್ಟು ಮಹಿಳೆಯರಿದ್ದಾರೆ. ರೊಮೇನಿಯಾ ಸೇನೆಯಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸಲು ‘SHE FOR ROMANIA’ ಎನ್ನುವ ಅಭಿಯಾನವನ್ನೂ ಜಾರಿಗೆ ತರಲಾಗಿದೆ.

ಅಮೆರಿಕ

ಅಮೆರಿಕ ಸೇನೆಯಲ್ಲಿ ಮಹಿಳೆಯರು

ಅಮೆರಿಕನ್ ಏರ್ ಫೋರ್ಸ್ ಮತ್ತು ಆರ್ಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಅವರು ವೃತ್ತಿಪರತೆ ಮತ್ತು ಗ್ಲಾಮರಸ್ ಲುಕ್‌ಗೆ ಹೆಸರಾಗಿದ್ದಾರೆ. 2023ರ ವೇಳೆಗೆ, ಅಮೆರಿಕದಲ್ಲಿ ಸಕ್ರಿಯ ಸೇನಾ ಪಡೆಯ ಶೇಕಡಾ 17.7 ರಷ್ಟು ಮಹಿಳೆಯರು ಇದ್ದಾರೆ. ಅಮೆರಿಕ ಸೇನೆಯಲ್ಲಿ ಸಾಧನೆಗೈದ ಪ್ರಮುಖರಲ್ಲಿ ಮೇರಿ ಎಡ್ವರ್ಡ್ಸ್ ವಾಕರ್ ಕೂಡ ಒಬ್ಬರು. ಇವರು ಅಮೆರಿಕ ಸೇನೆಯ ಮೊದಲ ಮಹಿಳಾ ಶಸ್ತ್ರಚಿಕಿತ್ಸಕಿ ಮತ್ತು ಇಲ್ಲಿಯವರೆಗೆ 'ಮೆಡಲ್ ಆಫ್ ಆನರ್' (Medal of Honor) ಪಡೆದ ಏಕೈಕ ಮಹಿಳೆಯಾಗಿದ್ದಾರೆ.

ಉಕ್ರೇನ್

ಉಕ್ರೇನ್‌ನಲ್ಲಿ ಸೇನೆಗೆ ಸೇರಿರುವ ಮಹಿಳೆಯರು

ಉಕ್ರೇನ್‌ನ ಮಹಿಳಾ ಸೈನಿಕರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಧೈರ್ಯ ಮತ್ತು ಸೌಂದರ್ಯಕ್ಕಾಗಿ ಜಗತ್ತಿನ ಗಮನ ಸೆಳೆದಿದ್ದಾರೆ. ಉಕ್ರೇನ್‌ನಲ್ಲಿ ಮಹಿಳೆಯರಿಗೆ ಸೇನೆ ಸೇರ್ಪಡೆ ಕಡ್ಡಾಯ ಇಲ್ಲದಿದ್ದರೂ, ಸಾವಿರಾರು ಮಹಿಳೆಯರು ಸ್ವಯಂಪ್ರೇರಿತರಾಗಿ ದೇಶವನ್ನು ರಕ್ಷಿಸಲು ಸೇನೆ ಸೇರಿದ್ದಾರೆ. ಉಕ್ರೇನ್ ಮಿಲಿಟರಿಯಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆಯು ಕಳೆದ ಎರಡು ವರ್ಷಗಳಲ್ಲಿ ಶೇ4ರಿಂದ ರಿಂದ ಶೇ 21ಕ್ಕೆ ಏರಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಸೇನೆಯಲ್ಲಿ ಮಹಿಳೆಯರು

1899ರಿಂದಲೂ ಆಸ್ಟ್ರೇಲಿಯಾ ಸೇನೆಯಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಶುಶ್ರೂಷಕಿಯರಾಗಿ ಮಾತ್ರ ನೇಮಕಗೊಳ್ಳುತ್ತಿದ್ದರು. ಆದರೆ ಈಗ ಎಲ್ಲಾ ವಿಭಾಗದಲ್ಲಿಯೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಸೇನಾ ಸಮವಸ್ತ್ರದಲ್ಲಿರುವ ಆಸ್ಟ್ರೇಲಿಯಾ ಮಹಿಳಾ ಸೈನಿಕರು ಸೌಂದರ್ಯಕ್ಕೂ ಹೆಸರುವಾಸಿ. ಸೇನಾ ನಿಯಮಗಳ ನಡುವೆಯೇ ಅಂದಗಾತಿಯರಾಗಿರುತ್ತಾರೆ ಇವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.