ಮೇ 3ರ ವರೆಗೂ ದೇಶದಾದ್ಯಂತ ಲಾಕ್‌ಡೌನ್ ಮುಂದುವರಿಕೆ, 7 ವಿಚಾರಗಳಲ್ಲಿ ನಿಮ್ಮ ಸಹಕಾರ ಅಗತ್ಯ: ಪ್ರಧಾನಿ ಮೋದಿ
ಎರಡನೇ ಹಂತದ ಲಾಕ್‌ಡೌನ್ (2.0) ಹೇಗಿರುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ 21 ದಿನಗಳ ದಿಗ್ಬಂಧನ ಮಂಗಳವಾರಕ್ಕೆ ಕೊನೆಯಾಗಲಿದ್ದು, ಮೇ 3ರ ವರೆಗೂ ಲಾಕ್‌ಡೌನ್ ವಿಸ್ತರಿಸುತ್ತಿರುವುದಾಗಿ ಘೋಷಿಸಿದ್ದಾರೆ. ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯವಾದ ಕೆಲವು ಸಡಿಕೆಗಳನ್ನು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಲಿದೆ. ಸುಧಾರಣೆ ಕಂಡುಬಂದ ಕಡೆಗಳಲ್ಲಿ ಏ.20ರಿಂದ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳ್ಳಲಿದೆ.
ಸುಧಾರಣೆ ಕಂಡುಬಂದ ಕಡೆಗಳಲ್ಲಿ ಏ.20ರಿಂದ ಹಂತ ಹಂತವಾಗಿ ಲಾಕ್‌ಡೌನ್ ತೆರವು
ಏಳು ವಿಚಾರಗಳಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ
ಈಗಾಗಲೇ ಇರುವ 600ಕ್ಕೂ ಹೆಚ್ಚು ಕೋವಿಡ್ ಆಸ್ಪತ್ರೆಗಳ ಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.
ದಿನಗೂಲಿ ನೌಕರರು, ಬಡವರಿಗೆ ಆದ್ಯತೆ ನೀಡಿ, ಅವರ ಜೀವನ ಸುಧಾರಿಸಲು ಕ್ರಮ. ರಾವಿ ಬೆಳೆಯ ಈ ಋತುವಿನ ಸಂದರ್ಭದಲ್ಲಿ ರೈತರಿಗೆ ಸಂಕಷ್ಟ ಕಡಿಮೆಯಾಗಲು ಕ್ರಮವಹಿಸಾಲಿದೆ. ಆ ಕುರಿತು ಮಾರ್ಗದರ್ಶಿ ಸೂತ್ರದಲ್ಲಿ ವಿವರಣೆ ನೀಡಲಾಗುತ್ತದೆ.
ನಾಳೆ (ಏಪ್ರಿಲ್ 15) ಸರ್ಕಾರವು ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ
ಏಪ್ರಿಲ್ 20ರ ವರೆಗೆ ಎಲ್ಲ ರಾಜ್ಯ, ಊರುಗಳಲ್ಲಿ ಕಟ್ಟು ನಿಟ್ಟಿನ ಗಮನವಹಿಸಬೇಕು. ಈ ಅಗ್ನಿ ಪರೀಕ್ಷೆಯಲ್ಲಿ ಸಫಲವಾಗುವ ಹಾಟ್‌ಸ್ಪಾಟ್‌ಗಳಿಗೆ ಕೊಂಚ ಸಡಿಲಿಕೆ ನೀಡಲಾಗುತ್ತದೆ. ಅತ್ಯಗತ್ಯ ವಿಷಯಗಳಿಗೆ ಮಾತ್ರ ಅನುಮತಿ ದೊರೆಯಲಿದೆ. ಆದರೆ, ಅದು ಕಟ್ಟುನಿಟ್ಟಾಗಿರುತ್ತದೆ.
ಕೊರೊನಾ ಹಾಟ್‌ಸ್ಪಾಟ್ ಆಗಿ ಪರಿಣಮಿಸುವ ಪ್ರದೇಶಗಳನ್ನೂ ಗುರುತಿಸಿ ಕಠೋರ ಕ್ರಮವಹಿಸಬೇಕಿದೆ
ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಾಟ್‌ಸ್ಪಾಟ್‌ಗಳಲ್ಲಿ ಹಿಂದಿಗಿಂತಲು ಹೆಚ್ಚಿನ ಗಮನ, ಕಟ್ಟುನಿಟ್ಟಾಗಬೇಕು.
ಲಾಕ್‌ಡೌನ್ 3 ಮೇ ವರೆಗೆ ವಿಸ್ತರಣೆ; ಕೊರೊನಾ ಹೊಸ ಪ್ರದೇಶಕ್ಕೆ ಹೋಗಲು ಬಿಡಲೇಬಾರದು ಎಂದು ಆಗ್ರಹಿಸಿದ ಪ್ರಧಾನಿ ಮೋದಿ
ಕೊರೊನಾ ವಿರುದ್ಧ ಯುದ್ಧ ಮುಂದುವರಿಸುವುದು ಹೇಗೆ ಎಂಬ ಬಗ್ಗೆ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೇರೆ ದೇಶಗಳಲ್ಲಿನ ಹಾನಿ ಗಮನಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ 25-30 ಪಟ್ಟು ಅಧಿಕವಾಗಿದೆ. ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ನಾವು ಈ ಸ್ಥಿತಿಯಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ.
ಸೋಂಕು ಪ್ರಕರಣಗಳು 550 ದಾಖಲಾಗಿದ್ದಾಗಲೇ 21 ದಿನಗಳ ಲಾಕ್‌ಡೌನ್ ಘೋಷಿಸಲಾಯಿತು. ಇದು ಭಾರಿ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿತು.
ಉತ್ಸವದಿಂದ ಭಾರತ ತುಂಬಿದೆ, ಸದಾ ಹಸಿರಾಗಿದೆ. ವಿಷು, ಬೈಸಾಖಿ ಮುಂತಾದ ಹೊಸ ವರ್ಷದ ದಿನ ಇಂದು. ಆರೋಗ್ಯಕ್ಕಾಗಿ ಪ್ರಾರ್ಥಿಸಿ ನಿಮಗೆಲ್ಲರಿಗೂ ಮಂಗಳ ಕಾಮನೆಗಳು.
ಸಾಮೂಹಿಕ ಶಕ್ತಿಯ ಪ್ರದರ್ಶನದ ಸಂಕಲ್ಪವೇ ಬಾಬಾ ಸಾಹೇಬರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ
ನಿಮ್ಮ ಸಹಕಾರದಿಂದ ಕೊರೊನಾ ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಅನುಕೂಲವಾಗಿದೆ: ಪ್ರಧಾನಿ ಮೋದಿ
ಮೋದಿ ಮಾತು: ನಿರೀಕ್ಷೆಗಳೇನು?
* ಪ್ರಯಾಣದ ಮೇಲೆ ಸಂಪೂರ್ಣ ನಿಷೇಧ ತೆರವಾಗಬಹುದು
ADVERTISEMENT
* ರಾಜ್ಯಗಳು ಬೇಡಿಕೆ ಸಲ್ಲಿಸಿದರೆ, ಕಾರ್ಮಿಕರ ಸಂಚಾರಕ್ಕಾಗಿ ವಿಶೇಷ ರೈಲು ಓಡಿಸಲು ಸಿದ್ಧ ಎಂದು ರೈಲ್ವೆ ಇಲಾಖೆ ಹೇಳಿದೆ. ಹಾಗಾಗಿ, ರೈಲು ಸೇವೆ ಭಾಗಶಃ ಆರಂಭವಾಗಬಹುದು
* ಚಾಲಕ ಸೇರಿ ಇಬ್ಬರು ಸಿಬ್ಬಂದಿ ಇರುವ ಲಾರಿಗಳ ಅಂತರರಾಜ್ಯ ಸಂಚಾರಕ್ಕೆ ಅವಕಾಶ ದೊರೆಯಲಿದೆ. ಅಗತ್ಯ ವಸ್ತು ಮತ್ತು ಇತರ ವಸ್ತಗಳು ಎಂಬ ವರ್ಗೀಕರಣವೂ ಇಲ್ಲಿ ಅನ್ವಯ ಆಗುವುದಿಲ್ಲ
* ಕೈಗಾರಿಕೆಗಳ 16 ವಲಯಗಳಿಗೆ ನಿರ್ಬಂಧ ಸಡಿಲವಾಗಲಿದೆ. ನಾಲ್ಕನೇ ಒಂದರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು ಎಂಬ ನಿಯಮ ಜಾರಿಯಾಗಬಹುದು
* 2–3 ದಿನಗಳಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡಲಿವೆ ಎಂಬ ಸುಳಿವನ್ನು ದೆಹಲಿ ಸರ್ಕಾರ ನೀಡಿದೆ
ದೇಶದಲ್ಲಿ 10,000 ದಾಟಿದ ಕೊರೊನಾ ಪ್ರಕರಣ
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಾದ್ಯಂತ ಕೋವಿಡ್–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿದೆ. ಒಟ್ಟು 10,363 ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 339ಕ್ಕೆ ಏರಿಕೆಯಾಗಿದೆ.