ADVERTISEMENT

ಕಲಬೆರಕೆ–ಏನು ಎತ್ತ?

ಆಹಾರ ಕಲಬೆರಕೆ_ಜಾಲ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 1:57 IST
Last Updated 28 ಜುಲೈ 2019, 1:57 IST
ನೂಡಲ್ಸ್‌ ತಯಾರಿ– ಸಾಂದರ್ಭಿಕ ಚಿತ್ರ
ನೂಡಲ್ಸ್‌ ತಯಾರಿ– ಸಾಂದರ್ಭಿಕ ಚಿತ್ರ   

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಕಳಪೆ ದರ್ಜೆಯ ಎಣ್ಣೆ ಬಳಸುವುದು, ಬಳಸಿದ ಎಣ್ಣೆಯನ್ನೇ ಬಳಸುವುದು, ಖಾದ್ಯ ಪದಾರ್ಥಗಳಿಗೆ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವುದು.

ಕಲಬೆರಿಕೆ ಆಹಾರ–ಕಾಯಿಲೆಗಳು

ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಕ್ಯಾನ್ಸರ್‌, ಅಲರ್ಜಿ, ಚರ್ಮದ ಕಾಯಿಲೆಗಳು, ಗ್ಯಾಸ್ಟ್ರಿಕ್‌, ಮೆದುಳಿನ ಸಮಸ್ಯೆ, ಶ್ವಾಸಕೋಶ, ಕಿಡ್ನಿ, ಉದರ ಸಂಬಂಧಿ ಕಾಯಿಲೆಗಳು. ಅಲ್ಜೈಮರ್‌, ಪಾರ್ಕಿನ್‌ಸನ್‌ನಂಥ ಕಾಯಿಲೆಗಳಿಗೂ ಪರೋಕ್ಷವಾಗಿ ಕಲಬೆರಕೆ ಕಾರಣ.

ADVERTISEMENT

*ಹಾಲು: ಡಿಟರ್ಜೆಂಟ್‌, ಯೂರಿಯಾ, ಹಿಟ್ಟಿನಂಥ ಪದಾರ್ಥಗಳು

*ತುಪ್ಪ: ವನಸ್ಪತಿ, ಪ್ರಾಣಿ ಕೊಬ್ಬು, ಆಲೂಗೆಡ್ಡೆ, ಗೆಣಸು

*ಅಡುಗೆ ಎಣ್ಣೆ: ಟಿಒಸಿಪಿ (ಟ್ರೈ ಆರ್ಥೋ ಕ್ರೆಸಿಲ್‌ ಫಾಸ್ಪೆಟ್‌), ಪೆಟ್ರೋಲಿಯಂ ಮೂಲದ ಎಣ್ಣೆ

*ಜೇನು ತುಪ್ಪ: ಸಕ್ಕರೆ ಪಾಕ, ಸಿಹಿ ಪದಾರ್ಥಗಳ ಮಿಶ್ರಣ

*ಸಕ್ಕರೆ: ಸೀಮೆ ಸುಣ್ಣ, ಗಾಜಿನ ಚೂರು

*ಬೇಳೆ ಕಾಳುಗಳು: ಬೆಣಚುಕಲ್ಲು, ಕಲ್ಲು, ಒಣಹುಲ್ಲು, ಕಡ್ಡಿ, ಕಳೆ ಬೀಜಗಳು, ಚೂರಾದ ಧಾನ್ಯಗಳು, ಕೀಟಗಳು, ಹಿಕ್ಕೆ

*ಗೋದಿ, ಮೈದಾ ಹಿಟ್ಟು : ಹೊಟ್ಟು

*ಮೆಣಸು: ಪರಂಗಿ ಬೀಜ, ಒಣಗಿದ ಹಿಪ್ಪು ನೇರಳೆ ಕಾಯಿಗಳು

*ಕೇಸರಿ: ತೆಂಗಿನ ನಾರು, ಬಣ್ಣ

*ಕಾಫಿ ಪುಡಿ: ಹುಣಸೆ ಬೀಜದ ಪುಡಿ, ಮರದ ಹೊಟ್ಟು

*ಚಹಾ ಪುಡಿ: ಬಳಕೆಯಾದ ಚಹಾಪುಡಿಗೆ ಬಣ್ಣ ಕಟ್ಟುವುದು, ಕಬ್ಬಿಣದ ಚೂರುಗಳ ಬೆರಕೆ

*ಮೆಣಸಿನಕಾಯಿ ಪುಡಿ: ಬಣ್ಣದಿಂದ ಕೂಡಿದ ಮರದ ಹೊಟ್ಟು

*ಉಪ್ಪು: ಸೀಮೆ ಸುಣ್ಣದ ಹರಳು, ಗಾಜಿನ ಪುಡಿ,

*ಲವಂಗ: ಮರದ ಚೂರು, ಎಣ್ಣೆತೆಗೆದ ಲವಂಗ,ಹಿಕ್ಕೆ

*ಚಕ್ಕೆ: ಇತರ ಮರಗಳ ಚಕ್ಕೆ

*ಜೀರಿಗೆ: ಕಳೆ ಗಿಡಗಳ ಬೀಜಗಳು

*ಸೇಬು: ಮೇಣದ ಲೇಪ

*ಗೆಣಸು: ರೆಡ್‌ ಆಕ್ಸೈಡ್‌ ಲೇಪ

*ಅವರೆಕಾಯಿ: ಎಣ್ಣೆ ಲೇಪದ ಮೂಲಕ ಕೃತಕ ಸೊಗಡು ಸೃಷ್ಟಿ

*ಹಸಿ ಬಟಾಣಿ: ಕೃತಕ ಬಣ್ಣ

*ಸಿಹಿ ತಿಂಡಿಗಳು: ರಾಸಾಯನಿಕ ಬಣ್ಣ, ಅಲ್ಯುಮಿನಿಯಮ್‌ ಮಿಶ್ರಿತ ಸಿಲ್ವರ್‌ ಲೇಪನ, ಕಳಪೆ ಕೋವಾ

*ರಾಗಿ: ರಾಸಾಯನಿಕ ಬಣ್ಣ

*ಕೋಳಿ, ಕುರಿ: ಆ್ಯಂಟಿಬಯೋಟಿಕ್‌, ಸ್ಟಿರಾಯ್ಡ್‌ ನೀಡುವುದು

*ಸೊಪ್ಪು: ಕಳೆ ಗಿಡಗಳ ಮಿಶ್ರಣ, ಕೀಟ ನಾಶಕ ಬಳಕೆ

*ಮಾವು: ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸುವುದು*ಹಣ್ಣುಗಳು: ಬಣ್ಣ, ವ್ಯಾಕ್ಸ್‌ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.