ADVERTISEMENT

ಕೆಸುವಿನ ರುಚಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಕೆಸುವಿನ ಸೊಪ್ಪಿನ ಕರಕಲಿ
ಬೇಕಾಗುವ ಸಾಮಗ್ರಿ: ಕೆಸುವಿನ ಸೊಪ್ಪು 8-10, ಹಸಿಮೆಣಸು 2, ಉಪ್ಪು, ಬೆಳ್ಳುಳ್ಳಿ 4-5, ಚಿಟಿಕೆ ಇಂಗು.

ವಿಧಾನ: ಕೆಸುವಿನ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹುಳಿಪುಡಿ ಹಾಕಿ ಬೇಯಿಸಿಕೊಳ್ಳಿ. ಹಸಿಮೆಣಸು ಉಪ್ಪು, ಇಂಗನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬೇಯಿಸಿದ ಕೆಸುವಿನ ಸೊಪ್ಪಿಗೆ ರುಬ್ಬಿದ ಮಸಾಲೆ ಹಾಕಿ ಕುದಿಸಿ. ನಂತರ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ.

ಹಲಸಿನ ತೊಳೆ ಪಲ್ಯ
ಸಾಮಗ್ರಿ:
ಕೆಸುವಿನ ಎಲೆ 8-10, ಉಪ್ಪಿನಲ್ಲಿ ನೆನೆಸಿಟ್ಟ ಹಲಸಿನ ತೊಳೆಗಳು 8-10, ಹಸಿಮೆಣಸು 2, ಸಾಸಿವೆ ಅರ್ಧ ಚಮಚ 

 ವಿಧಾನ:  ಕೆಸುವಿನ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಉಪ್ಪಿನಲ್ಲಿ ನೆನೆಸಿಟ್ಟ ಹಲಸಿನ ತೊಳೆಗಳನ್ನು ಸಣ್ಣದಾಗಿ ಹೆಚ್ಚಿ, ಹಿಂಡಿ ನೀರು ತೆಗೆಯಿರಿ. ಬಳಿಕ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿಸಿ, ಹೆಚ್ಚಿಟ್ಟ ಹಲಸಿನ ತೊಳೆಗಳನ್ನು ಹಾಕಿ ಹುರಿಯಿರಿ. ಅದು ಸ್ವಲ್ಪ ಹುರಿದ ನಂತರ ಹೆಚ್ಚಿಟ್ಟ ಕೆಸುವಿನ ಸೊಪ್ಪು ಹಾಕಿ ಇನ್ನಷ್ಟು ಹುರಿಯಿರಿ. ನಂತರ ಹಸಿಮೆಣಸು, ಉಪ್ಪನ್ನು ರುಬ್ಬಿಕೊಂಡು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುತ್ತಾ ಹುರಿದು ಕೆಳಗಿಳಿಸಿ.

ಎಲವರಿಗೆ ಸೊಪ್ಪಿನ ಪಲ್ಯ 
ಸಾಮಗ್ರಿ:
ಎಲವರಿಗೆ ಸೊಪ್ಪು 2 ಕಪ್, ಕಡಲೆ ಬೇಳೆ 2 ಚಮಚ, ಒಣಮೆಣಸು 3-4, ಎಳ್ಳು 1 ಚಮಚ, ಜೀರಿಗೆ ಅರ್ಧ ಚಮಚ, ಕಾಯಿತುರಿ ಅರ್ಧ ಕಪ್.

ವಿಧಾನ: ಎಲವರಿಗೆ ಸೊಪ್ಪನ್ನು ಸ್ವಚ್ಛ ಮಾಡಿಕೊಂಡು ಮಿಕ್ಸಿಗೆ ಹಾಕಿ ನೀರು ಹಾಕದೇ ತಿರುಗಿಸಿಕೊಳಿ.್ಳ ಬಾಣಲೆಗೆ ಎಣ್ಣೆ ಹಾಕಿ ಒಣಮೆಣಸು, ಕಡಲೆ ಬೇಳೆ ಎಳ್ಳು, ಜೀರಿಗೆ ಹಾಕಿ ಹುರಿದು ಪುಡಿ ಮಾಡಿಕೊಳ್ಳಿ. ಮತ್ತೊಂದು ಬಾಣಲೆಗೆ  ಎಣ್ಣೆ ಹಾಕಿ ಎಲವರಿಗೆ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಅದು ಹುರಿದ ನಂತರ ಪುಡಿ ಮಾಡಿದ ಮಸಾಲೆ ಹಾಗೂ ಕಾಯಿತುರಿ, ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.