ADVERTISEMENT

ಗರಂ ಫಿಶ್ ಫ್ರೈ...

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಚಿಕನ್ 65
ಬೇಕಾಗುವ ಸಾಮಗ್ರಿ: ಅರ್ಧ ಕೆ.ಜಿ. ಚಿಕನ್, 2 ಚಮಚ ಕಾರದ ಪುಡಿ, 2 ಚಮಚ ಗರಂ ಮಸಾಲಾ ಪುಡಿ, 2 ಈರುಳ್ಳಿ, 3 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಹಸಿ ಮೆಣಸಿನಕಾಯಿ, 2 ಟೊಮೆಟೋ, ತಕ್ಕಂತೆ ಎಣ್ಣೆ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ:
ಕ್ಲೀನ್ ಮಾಡಿದ ಚಿಕನ್‌ನನ್ನು ಸ್ವಲ್ಪ ಈರುಳ್ಳಿ ಮತ್ತು ಉಪ್ಪಿನೊಂದಿಗೆ ಕುಕ್ಕರಿನಲ್ಲಿಟ್ಟು ಮಿಡಿಯಮ್ ಆಗಿ ಬೇಯಿಸಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಕರಿಬೇವು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿ ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೋ, ಹಸಿ ಮೆಣಸಿನಕಾಯಿ, ಕಾರದಪುಡಿ, ಅರಶಿನಪುಡಿ, ಗರಂ ಮಸಾಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಹದವಾಗಿ ಬೆರೆಸಿ ಸ್ವಲ್ಪ ಹೊತ್ತು ಬೇಯಿಸಬೇಕು. ಆಗ ಬಿಸಿ ಬಿಸಿ ಸ್ವಾದಿಷ್ಟ ಚಿಕನ್ 65 ರೆಡಿ.

ಪಾಂಪ್ಲೆಂಟ್ ಫಿಶ್ ಫ್ರೈ
ಬೇಕಾಗುವ ಸಾಮಗ್ರಿಗಳು:
1 ಕೆ.ಜಿ. ಪಾಂಪ್ಲೆಟ್ ಫಿಶ್, ತಕ್ಕಂತೆ ಉಪ್ಪು 4 ಚಮಚ ಖಾರದ ಪುಡಿ, 1 ಮೊಟ್ಟೆ, 100 ಗ್ರಾಂ ರವಾ, ಫ್ರೈ ಮಾಡಲು ಬೇಕಾಗುವ ಎಣ್ಣೆ.

ಮಾಡುವ ವಿಧಾನ 1: ಸ್ವಚ್ಛಗೊಳಿಸಿದ ಪಾಂಪ್ಲೆಟ್‌ಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅರ್ಧಗಂಟೆ ನೆನೆಯಲು ಬಿಡಬೇಕು ನಂತರ ಕಾರದಪುಡಿ, ಸ್ವಲ್ಪ ಉಪ್ಪು ಮತ್ತು ಮೊಟ್ಟೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಸವರಬೇಕು ಅರ್ಧ ಗಂಟೆಯ ನಂತರ ರವಾದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಆಗ ಬಿಸಿಬಿಸಿ ಟೇಸ್ಟೀ ಪಾಂಪ್ಲೆಟ್ ಡೀಪ್ ಪ್ರಾಯ್ ತಿನ್ನಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.